government Government Scheme scheme.

ಪ್ರೈಸ್ ಮನಿ ಸ್ಕಾಲರ್ಶಿಪ್ 2023 ||

35,000/- ವರೆಗೂ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ಪ್ರೈಸ್ ಮನಿ ಸ್ಕಾಲರ್ಶಿಪ್ 2023 : ಅರ್ಜಿ ಸಲ್ಲಿಸುವ ಸುಲಭ ವಿಧಾನ

. ಇವತ್ತಿನ ಲೇಖನದಲ್ಲಿ ಪ್ರೈಸ್ ಮನಿ ಅಥವಾ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಕುರಿತು ನಿಮಗೆ ತಿಳಿಸಿಕೊಡಲಾಗುವುದು. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ, ಈ ಪ್ರೋತ್ಸಾಹ ಧನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರೋತ್ಸಾಹ ಧನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಯಾವ ಅರ್ಹತೆ ಇರಬೇಕು?, ವಿದ್ಯಾರ್ಹತೆ ಏನಿರಬೇಕು?, ಎಷ್ಟು ಪ್ರೋತ್ಸಾಹ ಧನ ದೊರೆಯುತ್ತದೆ?, ಯಾವ ವರ್ಗದ ಜನರಿಗೆ ಇದನ್ನು ನೀಡಲಾಗುತ್ತಿದೆ?, ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಈ ಪ್ರೋತ್ಸಾಹ ಧನವನ್ನು ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸುವುದು?, ಹೀಗೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

 

 ಪ್ರೋತ್ಸಾಹ ಧನ 2023 :

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು SC/ST ಗುಂಪಿನ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತಾರೆ. ದ್ವಿತೀಯ ಪಿಯುಸಿ, 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ, ಕೃಷಿ, ತಂತ್ರಜ್ಞಾನ, ಪಶುವೈದ್ಯಕೀಯ, ವೈದ್ಯಕೀಯ, M.A., MSc, ಇತರ ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಬಹುಮಾನದ ರೀತಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಸಚಿವಾಲಯವು ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಸಾಕಷ್ಟು ವಿದ್ಯಾರ್ಥಿವೇತನವನ್ನು ಈಗಾಗಲೇ ನೀಡುತ್ತಿದೆ. ಇದು ಹಿಂದುಳಿದ ಮಕ್ಕಳ ಶಾಲಾ ಶಿಕ್ಷಣವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

 ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು :

1.ಅರ್ಜಿದಾರರು ಎಸ್ಸಿ ಅಥವಾ ಎಸ್ ಟಿ ವರ್ಗಕ್ಕೆ ಸೇರಿದವರಾಗಿರಬೇಕು.

2.S.S.L.C./P.U.C./Degree/ P.G./ವೃತ್ತಿಪರ ತರಗತಿಗಳಲ್ಲಿ ಪದವಿಯನ್ನು ಮೊದಲನೆಯ ಪ್ರಯತ್ನದಲ್ಲಿಗೆ ಮುಗಿಸಿರಬೇಕು.

3.ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಾಗಿರಬೇಕು.

4.ಬಹುಮಾನದ ಮೊತ್ತದ ಕಡಿತಕ್ಕೆ ಯಾವುದೇ ಆದಾಯದ ಮಿತಿ ಇಲ್ಲ.

 

ವಿದ್ಯಾರ್ಹತೆ ಮತ್ತು ಪ್ರೋತ್ಸಾಹ ಧನದ ಮೊತ್ತ :

 

1. II ಪಿಯುಸಿ, 3 ವರ್ಷದ ಪೊಲಿಟಿಕ್ ಡಿಪ್ಲೋಮೋ ವಿದ್ಯಾರ್ಥಿಗಳಿಗೆ: ರೂ.20,000 ಪ್ರೋತ್ಸಾಹ ಧನ ದೊರೆಯುತ್ತದೆ.

 

2. ಪದವೀಧರ ವಿದ್ಯಾರ್ಥಿಗಳಿಗೆ : ರೂ.25,000 ಪ್ರೋತ್ಸಾಹ ಧನ ದೊರೆಯುತ್ತದೆ.

 

3. ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂ ಎಸ್ ಸಿ ಹಾಗೂ ಇತರ ವಿದ್ಯಾರ್ಥಿಗಳಿಗೆ : ರೂ.30,000 ಪ್ರೋತ್ಸಾಹ ಧನ ದೊರೆಯುತ್ತದೆ.

 

4. ಕೃಷಿ, ತಂತ್ರಜ್ಞಾನ, ಪಶುವೈದ್ಯಕೀಯ, ವೈದ್ಯಕೀಯ ವಿದ್ಯಾರ್ಥಿಗಳಿಗೆ : ರೂ.35,000 ಪ್ರೋತ್ಸಾಹ ಧನ ದೊರೆಯುತ್ತದೆ.

 

ಪ್ರೈಜ್ ಮನಿ ಸ್ಕಾಲರ್‌ಶಿಪ್‌ಗೆ ಅಗತ್ಯವಿರುವ ದಾಖಲೆಗಳು:

1. ಆಧಾರ್ ಕಾರ್ಡ್

2.ಜಾತಿ ಪ್ರಮಾಣ ಪತ್ರ

3. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (100 KB)

4.ಆಧಾರ್ ಸಂಬಂಧಿತ ಬ್ಯಾಂಕ್ ವಿವರಗಳು (ಖಾತೆ ಪಾಸ್ ಪುಸ್ತಕ)

5. ಫೋಟೋ (20KB)

6.ಅಂಕಪಟ್ಟಿಗಳು

6.ಜಾತಿ ಸಂಖ್ಯೆ: RD ಯಿಂದ ಪ್ರಾರಂಭವಾಗುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ :

 

ಹಂತ 1: ಮೊದಲಿಗೆ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

Click here

ಹಂತ 2: ನಂತರ ನಿಮಗೆ ಒಂದು ಪುಟ ತೆರೆಯುತ್ತದೆ. ಆನ್ ಲೈನ್ ಅರ್ಜಿ ಆಯ್ಕೆ ಮಾಡಿ. ಅರ್ಜಿಯಲ್ಲಿ ಸಂಬಂಧಪಟ್ಟ ನಿಮ್ಮ ವೈಯಕ್ತಿಕ ವಿಷಯಗಳನ್ನು ಭರ್ತಿ ಮಾಡಿ.

ಹಂತ 3: ನಂತರ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಹಂತ 4: ನಂತರ ನಿಮಗೆ ಒಂದು ಡಿಕ್ಲರೇಷನ್ ಬಾಕ್ಸ್ ದೊರೆಯುತ್ತದೆ ಅದರ ಮೇಲೆ ಚೆಕ್ ಮಾಡಿ.

ಹಂತ 5 : ಕೊನೆಯದಾಗಿ ಪ್ರೋಸಿಡ್ ಎಂಬ ಬಟನ್ ಅನ್ನು ಒತ್ತಿರಿ.

 

ಸೂಚನೆ: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ ಸೈಟ್ ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ/ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡುವುದು.

 

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 28,2,2023

 

ಪ್ರೋತ್ಸಾಹ ಧನದ ವಿದ್ಯಾರ್ಥಿವೇತನ ಸಂಪರ್ಕ ಮಾಹಿತಿ:

ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ ಕಮಿಷನರೇಟ್ 5 ನೇ ಮಹಡಿ, MS ಕಟ್ಟಡ ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು- 560001 ಇಮೇಲ್ ಐಡಿ: [email protected] ಫ್ಯಾಕ್ಸ್ ಸಂಖ್ಯೆ: 080-22353757 ಸಹಾಯವಾಣಿ ಸಂಖ್ಯೆ: 08022634300

 

ಎಲ್ಲಾ SC/ST ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆಯಬಹುದಾಗಿದೆ. 

LEAVE A RESPONSE

Your email address will not be published. Required fields are marked *