governament Government Scheme scheme.

ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ

ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ

ಹಾವೇರಿ: ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಫೆಬ್ರವರಿ ಮಾಹೆಯಲ್ಲಿ 5 ದಿನಗಳ ಕಾಲ ರೈತ ಮಹಿಳೆಯರಿಗೆ ಉಚಿತ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಫೆ. 5ರೊಳಗಾಗಿ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ, ರಾಣಿ ಬೆನ್ನೂರ (ತಾ)ಗೆ ಈ ವಿಳಾಸದಲ್ಲಿ ತಮ್ಮ ಆಧಾರ ಕಾರ್ಡ ಮತ್ತು ಉತಾರ (ಪಾಣಿ)ಯ ಪ್ರತಿಯೊಂದಿಗೆ ಖುದ್ದಾಗಿ ಭೇಟಿ ನೀಡಿ ಹೆಸರನ್ನು ನೊಂದಾಯಿಸಲು ಕೋರಲಾಗಿದೆ.

ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ಒಟ್ಟು 30 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖಸ್ಥರು ತಿಳಿಸಿದ್ದಾರೆ.

ತರಬೇತಿಯ ನಂತರ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ 08373-253524/ 8880496268ಗೆ ಸ೦ಪರ್ಕಿಸಬಹುದು.

LEAVE A RESPONSE

Your email address will not be published. Required fields are marked *