Government Scheme govt. scheme.

ಉದ್ಯೋಗಿನಿ ಯೋಜನೆ 2023

 ಉದ್ಯೋಗಿನಿ ಯೋಜನೆ  2023
ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ
ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ದಿ ನಿಗಮ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರು 3 ಲಕ್ಷದ ವರೆಗೂ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ.
ಏನಿದು ಉದ್ಯೋಗಿನಿ ಯೋಜನೆ?
ಮಹಿಳೆಯರ ಸಬಲೀಕರಣಕ್ಕಾಗಿ, ಮಹಿಳೆಯರ ಉದ್ಯಮಶೀಲತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಈ ಮಹತ್ವದ ಯೋಜನೆ ಜಾರಿಗೆ ತಂದಿತ್ತು.
ಮಹಿಳೆಯರು ಸ್ವ-ಉದ್ಯೋಗ ಪ್ರಾರಂಬಿಸಲು ಈ ಯೋಜನೆಯು ಸಹಾಯಕವಾಗಿದ್ದು, ಸುಮಾರು 88 ವಿವಿಧ ಸಣ್ಣ ಉದ್ಯಮ ಪ್ರಾರಂಭಿಸಲು ಈ ಯೋಜನೆಯಡಿ 3 ಲಕ್ಷದ ತನಕ ಮಹಿಳೆಯರು ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ.
ಉದ್ಯೋಗಿನಿ ಯೋಜನೆಯಡಿಯಲ್ಲಿ ಯಾರು ಸಾಲ ಪಡೆಯಬಹುದು?
ಈ ಯೋಜನೆಯಲ್ಲಿ ಸಮಾಜದ ಎಲ್ಲಾ ವರ್ಗದ ಮಹಿಳೆಯರು ಸ್ವ ಉದ್ಯೋಗ ಮಾಡಲು ಸಾಲ ಪಡೆಯಬಹುದಾಗಿದ್ದು, ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಆಧ್ಯತೆ ನೀಡಲಾಗಿದೆ.
ಎಲ್ಲಿ ಸಾಲ ಪಡೆಯಬಹುದು?
ಉದ್ಯೋಗಿನಿ ಯೋಜನೆಯಡಿಯಲ್ಲಿ ಮಹಿಳೆಯರು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಈ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಯಾವ ಉದ್ಯಮ ಆರಂಭಿಸಬಹುದು?
ಈ ಯೋಜನೆಯಲ್ಲಿ ಮಹಿಳೆಯರು ಊದುಬತ್ತಿ ತಯಾರಿ, ಬಳೆ ತಯಾರಿ, ಬ್ಯೂಟಿ ಪಾರ್ಲರ್, ಬೇಕರಿ, ಸ್ವೀಟ್ ಶಾಪ್, ಗಾರ್ಮೆಂಟ್ಸ್, ಹೊಲಿಗೆ, ಈ ರೀತಿಯಾಗಿ ಸುಮಾರು 88 ವಿವಿಧ ಸಣ್ಣ ಉದ್ಯಮ ಆರಂಭಿಸಲು ಈ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದಾಗಿದೆ.
ಈ ಸಾಲ ಪಡೆಯಲು ಇರಬೇಕಾದ ಅರ್ಹತೆ :
√. ಉದ್ಯೋಗಿನಿ ಯೋಜನೆಯು ಮಹಿಳೆಯರಿಗೆ ಮಾತ್ರ ಇದ್ದು, ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ಪ್ರಥಮ ಆಧ್ಯತೆ ನೀಡಲಾಗಿದೆ.
√. ಕುಟುಂಬದ ಆದಾಯ 1.5 ಲಕ್ಷದ ಒಳಗಿರಬೇಕು.
√. 18 ರಿಂದ 55 ವರ್ಷದ ಒಳಗಿನ ಮಹಿಳೆಯರು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು :
√. ಅರ್ಜಿದಾರರ ಫೋಟೋ, ಆಧಾರ ಕಾರ್ಡ್, ಜಾತಿ ಆದಾಯ ಪ್ರತಿ, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
√. ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಸಾಲ ಪಡೆಯಬಯಸುವ ಬ್ಯಾಂಕ್ ನ ವೆಬ್ಸೈಟ್ನಿಂದ ಉದ್ಯೋಗಿನಿ ಯೋಜನೆಯ ಅರ್ಜಿ ಡೌನ್ಲೋಡ್ ಮಾಡಿ.
√. ಅರ್ಜಿಯನ್ನು ತುಂಬಿ, ಸಂಬಂದಪಟ್ಟ ಕೇಳಿರುವ ದಾಖಲೆ ಪ್ರತಿಯ ಜೊತೆಗೆ ಬ್ಯಾಂಕ್ ಗೆ ಭೇಟಿ ನೀಡಬಹುದಾಗಿದೆ. ಅಥವಾ ನೇರವಾಗಿ ಬ್ಯಾಂಕ್ ಗೆ ಬೇಟಿ ನೀಡಿ ನೀವು ಮಾಡಬಯಸುವ ಉದ್ಯೋಗದ ಬಗ್ಗೆ ತಿಳಿಸಿ ಈ ಯೋಜನೆಯಡಿಯಲ್ಲಿ ನೇರವಾಗಿ ಈ ಸಾಲ ಸೌಲಭ್ಯ ಪಡೆಯಬಹುದಾಗಿದೆ.
√.  ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

LEAVE A RESPONSE

Your email address will not be published. Required fields are marked *