ಸರ್ಕಾರಿ ಯೋಜನೆ

ಕರ್ನಾಟಕ ರಾಜ್ಯ ಸರ್ಕಾರದಿಂದ 60 ಸಾವಿರ ರೂಪಾಯಿ ಮದುವೆ ಸಹಾಯಧನ…! ಈ ಸಹಾಯಧನ ಪಡೆದುಕೊಳ್ಳಬೇಕೆಂದರೆ ಇರುವ ಅರ್ಹತೆ ಬಗ್ಗೆ ಈಗಲೇ ತಿಳಿದುಕೊಳ್ಳಿ….

ನಿಮ್ಮ ಹತ್ತಿರ ಕಾರ್ಮಿಕ ಕಾರ್ಡ್ ಇದ್ದರೆ ಸರ್ಕಾರವು ಕಾರ್ಮಿಕರ ಮಕ್ಕಳ ಮದುವೆ ಸಮಾರಂಭಕ್ಕೆ 60 ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದು ಈ ಸಹಾಯಧನವನ್ನು ಪಡೆದುಕೊಳ್ಳಬೇಕೆಂದರೆ ನೀವು ಏನು ಮಾಡಬೇಕೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಈ ಸಹಾಯಧನ ಪಡೆದುಕೊಳ್ಳಬೇಕೆಂದರೆ ಅರ್ಹತೆ ಏನಿರಬೇಕು.?

ನಿಮಗೆ ಈ ಮದುವೆಯ ಸಹಾಯಧನ ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಕಾರ್ಮಿಕ ಕಾರ್ಡ್ ಇರಬೇಕು.

ಕಾರ್ಮಿಕರ ಮಕ್ಕಳಿಗೆ ಮದುವೆ ಸಮಾರಂಭದಲ್ಲಿ ಸಹಾಯವಾಗಲೆಂದು ಈ ಧನ ಸಹಾಯವನ್ನು ಸರ್ಕಾರವು ಘೋಷಿಸಿದ್ದು ನಿಮ್ಮ ಹತ್ತಿರ ಕಾರ್ಮಿಕ ಕಾರ್ಡ್ ಇದ್ದರೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತೀರಿ..
ಅರ್ಜಿ ಸಲ್ಲಿಸಲು ಅರ್ಹತೆ ಮಾಹಿತಿ ಇಲ್ಲಿದೆ..

ನೀವು ಈ ಸಹಾಯಧನ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಕಾರ್ಮಿಕ ಕಾರ್ಡ್ ಒಂದು ವರ್ಷಕ್ಕಿಂತ ಹಳೆಯದಾಗಿರಬೇಕು..

ಅಂದರೆ ನೀವು ಕಾರ್ಮಿಕ ಕಾರ್ಡ್ ಒಂದು ವರ್ಷಕ್ಕಿಂತ ಮೊದಲು ಪಡೆದುಕೊಂಡಿರಬೇಕು.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನೀವು ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುವುದಿಲ್ಲ.

ಅದಕ್ಕಾಗಿ ಮೊದಲು ನೀವು ನಿಮ್ಮ ಕಾರ್ಮಿಕ ಕಾರ್ಡ್ ಎಷ್ಟು ಹಳೆಯದಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ..

ಅರ್ಜಿ ಸಲ್ಲಿಸುವುದು ಹೇಗೆ..?

ಮದುವೆ ಆದ ನಂತರ ಮೂರು ತಿಂಗಳು ಒಳಗಾಗಿ ನೀವು ಈ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ..
ಅರ್ಜಿ ಸಲ್ಲಿಸಲು ನೀವು ಎರಡು ಮದುವೆಯ ಆಮಂತ್ರಣ ಪತ್ರವನ್ನು ಕಾರ್ಮಿಕ ಆಫೀಸಿಗೆ ದಾಖಲಾತಿಗಾಗಿ ನೀಡಬೇಕಾಗುತ್ತದೆ.
ಅಲ್ಲದೆ ಪಾಲಕರ ಕಾರ್ಮಿಕ ಕಾರ್ಡ್ ಒಂದು ಪ್ರತಿಯನ್ನು ಸಹ ನೀವು ಅದರ ಜೊತೆಗೆ ನೀಡಬೇಕಾಗುತ್ತದೆ..

ಅಥವಾ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೇವಲ ಈ ಎರಡು ಮಾರ್ಗಗಳು ಮಾತ್ರ ಹಣ ಪಡೆದುಕೊಳ್ಳಲು ಇದ್ದು ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ನೀವು ಈ ಧನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ..

ಕಾರ್ಮಿಕ ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿ..

ಪ್ರಿಯ ಓದುಗರೇ ಪ್ರಿಯ ಓದುಗರೆ 2022-2023 ನೇ ಸಾಲಿನ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಇಲ್ಲಿದೆ ಓದಿ ಇಲ್ಲಿದೆ ಓದಿ
ಈ ಲೇಖನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಯಾವೆಲ್ಲ ತರಗತಿಯವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆಂದು ತಿಳಿದುಕೊಳ್ಳೋಣ.
ಕಾರ್ಮಿಕ ಇಲಾಖೆಯು  ಲೇಬರ್ ಕಾರ್ಡ್ ಹೊಂದಿರುವ ಪೋಷಕರ ಮಕ್ಕಳಿಗೆ ಅನುಕೂಲವಾಗಲೆಂದು ಕಲಿಕಾ ಭಾಗ್ಯದ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಹಾಗೂ ಈ ವರ್ಷವೂ ಕೂಡ ಲೇಬರ್ ಕಾರ್ಡ್ ಹೊಂದಿರುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಯಾವುದೇ ತರಗತಿಯವರು ಅಂದರೆ ನರ್ಸರಿಯಿಂದ ಡಿಗ್ರಿ ಕಲಿಯುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದು ವಾರ್ಷಿಕ ಸಹಾಯಧನವಾಗಿದ್ದು ಸಹಾಯಧನವಾಗಿದ್ದು ಅಂದರೆ ವರ್ಷಕ್ಕೆ ಒಂದು ಸಾರಿ ವಿದ್ಯಾರ್ಥಿ ವೇತನವನ್ನು ಒಬ್ಬ ವಿದ್ಯಾರ್ಥಿಗೆ ಕೊಡಲಾಗುತ್ತದೆ.

ಕೆಳಗಡೆ ಯಾವ ಯಾವ ತರಗತಿಯವರಿಗೆ ಎಷ್ಟೆಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ತಿಳಿದುಕೊಳ್ಳಿ.

1.ಶಿಶುವಿಹಾರ ಪೂರ್ವ ಶಾಲೆ ಅಥವಾ ನರ್ಸರಿ ಅವರಿಗೆ ವರ್ಷಕ್ಕೆ 5000ಗಳನ್ನು ನೀಡಲಾಗುತ್ತದೆ.
2. ಒಂದರಿಂದ ನಾಲ್ಕನೇ ತರಗತಿಯವರೆಗೆ 5000ಗಳನ್ನು ನೀಡಲಾಗುತ್ತದೆ.
3. ಐದರಿಂದ ಎಂಟನೇ ತರಗತಿಯವರೆಗೆ ರೂ.8,000ಗಳನ್ನು ನೀಡಲಾಗುತ್ತದೆ
4. 9 ರಿಂದ 10 ನೇ ತರಗತಿಯವರೆಗೆ 12,000ಗಳನ್ನು ನೀಡಲಾಗುತ್ತದೆ.
5. ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅವರಿಗೆ 15 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
6. ಪಾಲಿಟೆಕ್ನಿಕ್ ಅಥವಾ ಡಿಪ್ಲೋಮಾ ಅಥವಾ ಐಟಿಐ ಅವರಿಗೆ 20000 ನೀಡಲಾಗುತ್ತದೆ
7. ಬಿ ಎಸ್ ಸಿ ನರ್ಸಿಂಗ್ ಎನ್ಎಂಎಂ ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ 40,000 ನೀಡಲಾಗುತ್ತದೆ
8. ಡಿಎಡ್ ಮತ್ತು ಬಿಎಡ್ ಅವರಿಗೆ ತಲಾ 25,000 35,000 ನೀಡಲಾಗುತ್ತದೆ.

9. ಪದವಿ ಶಿಕ್ಷಣ ವರೆಗೆ 25,000ಗಳನ್ನು ನೀಡಲಾಗುತ್ತದೆ
10. ಎಲ್‌ಎಲ್‌ಬಿ ಹಾಗೂ ಎಲ್ಎಲ್ಎಂ ಅವರಿಗೆ 30,000 ನೀಡಲಾಗುತ್ತದೆ
11. ಯಾವುದೇ ಸ್ನಾತಕೋತ್ತರ ಪದವಿಯವರಿಗೆ 35,000 ನೀಡಲಾಗುತ್ತದೆ.
12. ಬಿ ಇ /ಬಿ ಇ ಬಿ ಟೆಕ್ ಅಥವಾ ಯಾವುದೇ ಸಮಾನಾಂತರ ಪದವಿ ಶಿಕ್ಷಣದವರೆಗೆ 50,000 ನೀಡಲಾಗುತ್ತದೆ.
13. ಎಂ ಟೆಕ್ ಅಥವಾ ಎಂಎ ರವರಿಗೆ 60,000 ನೀಡಲಾಗುತ್ತದೆ
14. ವೈದ್ಯಕೀಯ ಅಂದರೆ ಎಂಬಿಬಿಎಸ್ ಬಿಎಎಂಎಸ್ ಬಿಡಿಎಸ್ ಬಿ ಎಚ್ ಎ ಎಂ ಎಸ್ ಅದರ ಸಮಾನಾಂತರ 60,000 ನೀಡಲಾಗುತ್ತದೆ
15. ಎಂ ಡಿ 75,000 ನೀಡಲಾಗುತ್ತದೆ.
16. ಪಿ ಎಚ್ ಡಿ ಅಥವಾ ಎಂಪಿಎಲ್ ಕೋರ್ಸ್ ಗಳಿಗೆ 25000 ನೀಡಲಾಗುತ್ತದೆ.
17. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಆಗುವ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ಕೊಡಲಾಗುತ್ತದೆ.

ಹೇಗೆ ಅರ್ಜೆಯನ್ನು ಸಲ್ಲಿಸಬೇಕು..?

Click here

ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿಯನ್ನು ಸಲ್ಲಿಸಿ..

ಲೇಬರ್ಸ್ ಕಾರ್ಡ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾಗುವ ಅರ್ಹತೆಗಳು.
1.ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಮಗುವಿನ ತಂದೆ ಅಥವಾ ತಾಯಿ ಕಟ್ಟಡ ಕಾರ್ಮಿಕರಾಗಿದ್ದು ಮಂಡಳಿಯಲ್ಲಿ ನೊಂದಣಿ ಆಗಿರಬೇಕು.
2. ನೊಂದಣಿ ಚಾಲ್ತಿಯಲ್ಲಿರಬೇಕು.
3. ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಮುಂದಿನ ತರಗತಿಗೆ ದಾಖಲಾಗಿರಬೇಕು.

ಆನ್ಲೈನ್ ಅರ್ಜಿ ಸಲ್ಲಿಸಲು ಅವಶ್ಯಕವಿರುವ ದಾಖಲೆಗಳ ವಿವರ.
1.ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್ ಸಂಖ್ಯೆ.
2. ಎಸ್ ಎಸ್ ಎಲ್ ಸಿ ಪರೀಕ್ಷಾ ನೋಂದಣಿ ಸಂಖ್ಯೆ.
3. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್.
4. ವಿದ್ಯಾರ್ಥಿಯ ಎಸ್ ಏ ಟಿ ಐ ಡಿ
5. ಯೂನಿವರ್ಸಿಟಿ ಅಥವಾ ರಿಜಿಸ್ಟ್ರೇಷನ್ ಬೋರ್ಡ್ ಐಡಿ.
6. ಪ್ರಸ್ತುತ ವರ್ಷದ ಶುಲ್ಕ ರಶೀದಿ.(ಐ ಐ ಡಿ ಅಥವಾ ಐ ಐ ಎಂ ಮುಂತಾದ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಶೈಕ್ಷಣಿಕ ಕೋರ್ಸ್ ಗಳಿಗೆ ಮಾತ್ರ ಅನ್ವಯಿಸುತ್ತದೆ.)
7. ಹಿಂದಿನ ಶೈಕ್ಷಣಿಕ ವರ್ಷದ ಮಾರ್ಕ್ಸ್ ಕಾರ್ಡ್.
ಸೂಚನೆ. ನೊಂದಣಿದಾರರ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು ಹಾಗೂ ಬ್ಯಾಂಕ್ ಮೂಲಕ ಎನ್ಪಿಸಿಐಗೆ ಮ್ಯಾಪ್ ಮಾಡಿರಬೇಕು.

ಈಗ ಅರ್ಜಿ ಸಲ್ಲಿಸುವುದು ಹೇಗೆ ..?


ಸ್ಕಾಲರ್ಶಿಪ್ ಅಲ್ಲಿ ಎರಡು ರೀತಿಯ ಸ್ಕಾಲರ್ಶಿಪ್ ಬರುತ್ತದೆ ಒಂದು ಫ್ರೀ ಮ್ಯಾಟ್ರಿಕ್ಸ್ ಸ್ಕಾಲರ್ಶಿಪ್ ಹಾಗೂ ಪೋಸ್ಟ್ ಮ್ಯಾಟ್ರಿಕ್ಸ್ ಸ್ಕಾಲರ್ಶಿಪ್.

ಒಂದರಿಂದ 10ನೇ ತರಗತಿಯವರಿಗೆ ಪ್ರಿ ಮ್ಯಾಟ್ರಿಕ್ಸ್ ಸ್ಕಾಲರ್ಶಿಪ್ ಅನ್ವಯಿಸುತ್ತದೆ ಹಾಗೂ 10ನೇ ತರಗತಿ ಮೇಲ್ಪಟ್ಟವರಿಗೆ ಪೋಸ್ಟ್ ಮ್ಯಾಟ್ರಿಕ್ಸ್ ಸ್ಕಾಲರ್ಶಿಪ್ ಅನ್ವಯಿಸುತ್ತದೆ.
ಪ್ರಿಮೆಟಿಕ್ಸ್ ಸ್ಕಾಲರ್ಶಿಪ್ ಗೆ ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು.
ಮೊದಲಿಗೆ ssp. Karnataka.gov.in ಈ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಮೊದಲಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ನಲ್ಲಿ ಕ್ಲಿಕ್ ಮಾಡಿಕೊಳ್ಳಬೇಕು ನಂತರ ಪೋರ್ಟಲ್ನ ಮುಖಪುಟ ತೆರೆಯುತ್ತದೆ. ನಂತರ ಪೋರ್ಟಲ್ ನಲ್ಲಿ ನಿಮ್ಮ ಹೊಸ ಖಾತೆಯನ್ನು ಸೃಷ್ಟಿಸಬೇಕು. ಹೊಸ ಕಥೆಯನ್ನು ಸೃಷ್ಟಿಸಲು ಪೋರ್ಟಲ್ ನಲ್ಲಿರುವ ಹೊಸ ಖಾತೆಯನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ ಮಾಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಮಾಹಿತಿಯನ್ನು ನೀಡಿ ಖಾತೆಯನ್ನು ಸೃಷ್ಟಿಸಬೇಕು. ಅಕೌಂಟ್ ಕ್ರಿಯೇಟ್ ಮಾಡಿದ ನಂತರ ಪೋಷಕರ ಡೀಟೇಲ್ಸ್ ಅಂದರೆ ಆಧಾರ್ ಕಾರ್ಡ್ ಲೇಬರ್ ಕಾರ್ಡ್ ಇನ್ನಿತರ ಮಾಹಿತಿಯನ್ನು ನೀಡಬೇಕು. ನಂತರ ಅಪ್ಲಿಕೇಶನ್ ಅನ್ನು ಹಾಕಬೇಕು ಅಪ್ಲಿಕೇಶನ್ ಹಾಕಲು ನಾಲ್ಕು ಹಂತಗಳು ಇರುತ್ತವೆ, ಅದರಲ್ಲಿ ಮೊದಲನೆಯ ಹಂತ ದಲ್ಲಿ ಪರ್ಸನಲ್ ಇನ್ಫಾರ್ಮಶನ್ ಅನ್ನು ಹಾಕಬೇಕು ಎರಡನೆಯ ಹಂತದಲ್ಲಿ ಕಾಲೇಜ್ ಡೀಟೇಲ್ಸ್ ಅನ್ನ ಹಾಕಬೇಕು. ನಂತರ ಹಾಸ್ಟೆಲ್ ಹಾಗೂ e ಸಿಗ್ನೇಚರ್ ಮಾಡಬೇಕು. ನಂತರ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕು. ಸಬ್ಮಿಟ್ ಮಾಡಿದ ನಂತರ ನಿಮಗೆ ಯಾವೆಲ್ಲ ಸ್ಕಾಲರ್ಶಿಪ್ ಅನ್ವಯವಾಗುತ್ತದೆ ಎಂದು ಅಲ್ಲಿ ತೋರಿಸುತ್ತದೆ. ನಿಮ್ಮ ತಂದೆ ತಾಯಿ ಲೇಬರ್ ಕಾರ್ಡ್ ಹೊಂದಿದರೆ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ವಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ

ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ 2022
ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳನ್ನು ಶಿಕ್ಷಣದತ್ತ ಉತ್ತೇಜಿಸಲು ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ತ್ಯಜಿಸುತ್ತಾರೆ. ಕಟ್ಟಡ ಕಾರ್ಮಿಕರ ಅನೇಕ ಮಕ್ಕಳು ಹಣಕಾಸಿನ ಕೊರತೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯೊಂದಿಗೆ ಸರ್ಕಾರವು ಅವರಿಗೆ ಹಣಕಾಸಿನ ನೆರವು ನೀಡುವ ಮೂಲಕ ಅವರ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತದೆ.

LEAVE A RESPONSE

Your email address will not be published. Required fields are marked *