General information ಪಟ್ಟಿ ಭಾಗ್ಯ ರೈತ ಸಾಲಮನ್ನಾ ಹೆಸರು

ಕೆಲವು ರೈತರಿಗೇಕೆ ಸಾಲಮನ್ನಾ ಭಾಗ್ಯ ಸಿಗಲಿಲ್ಲ. ಹೆಸರು ಪಟ್ಟಿಯಲ್ಲಿದ್ದರೂ ಸಾಲಮನ್ನಾ ಏಕಾಗಿಲ್ಲಾ? ಇಲ್ಲಿದೆ ಮಾಹಿತಿ

H.D. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ರಾಜ್ಯದ ರೈತರ ಒಂದು ಲಕ್ಷ ರೂಪಾಯಿಯವರೆಗೆ  ಸಾಲಮನ್ನಾ ಘೋಷಣೆ ಮಾಡಿದ್ದರು. ಹೌದು, 2018 ರಲ್ಲಿ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS)  ಸಮ್ಮಿಶ್ರ ಸರ್ಕಾರವಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ H.D. ಕುಮಾರ ಸ್ವಾಮಿಯವರು ಸಾಲಮನ್ನಾ ಭಾಗ್ಯ ನೀಡಿದ್ದರು.

ಚುನಾವಣೆ ಪೂರ್ವದಲ್ಲಿ ತಾವು ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುತ್ತೇನೆಂದು ಘೋಷಣೆ ಮಾಡಿದ್ದರು. ಅದೇ ರೀತಿ ರಾಜ್ಯದ ಎಲ್ಲಾ ರೈತರಿಗೆ ಒಂದು ಲಕ್ಷ ರೂಪಾಯಿಯವರೆಗೆ ಸಾಲಮನ್ನಾ ಘೋಷಣೆ ಮಾಡಿದ್ದರು. ಆದರೆ ಸಾಲಮನ್ನಾ ಭಾಗ್ಯ ಕೆಲವು ರೈತರಿಗೆ ಸಿಕ್ಕರೆ ಇನ್ನೂ ಲಕ್ಷಾಂತರ ರೈತರಿಗೆ ಈ ಭಾಗ್ಯ ಸಿಗಲಿಲ್ಲ. ನಂತರ B.S.ಯಡಿಯೂರಪ್ಪನವರು ಸಾಲಮನ್ನಾ ಭಾಗ್ಯದಿಂದ ಉಳಿದ ರೈತರಿಗೆ ಸಾಲಮನ್ನಾ ಮಾಡಲಾಗುವುದು ಎಂದಿದ್ದರು. ಆದರೂ ಇನ್ನೂ ಎಷ್ಟೋ ರೈತರು ಸಾಲಮನ್ನಾ ಭಾಗ್ಯ ಸಿಗಲಿಲ್ಲ.

ಸಾಲಮನ್ನಾ ಘೋಷಣೆ ಮಾಡಿದಾಗ ಸಾಕಷ್ಟು ಷರತ್ತುಗಳನ್ನು ವಹಿಸಿದ್ದರಿಂದ ದಾಖಲೆಗಳನ್ನು ನೀಡುವಲ್ಲಿ ಬಹಳಷ್ಟು ರೈತರು ವಿಫಲರಾಗಿದ್ದರೆ, ಮತ್ತೆ ಕೆಲವು ರೈತರಿಗೆ ತಾಂತ್ರಿಕ ಕಾರಣಗಳಿಂದ ಸಮಸ್ಯೆಗಳಾಯಿತು. ಈಗ ಸಾಲಮನ್ನಾ ಆಗದೆ ಉಳಿದಿರುವ ರೈತರಿಗೆ ಹೊಸ ಸಾಲವೂ ಸಿಗುತ್ತಿಲ್ಲ.  ಹಳೆಯ ಸಾಲದ ರಿನ್ಯೂವಲ್ ಕೂಡ ಆಗದೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಸಾಲಮನ್ನಾ ಆಗದೇ ಬಾಕಿಯಿರುವ ಲಕ್ಷಕ್ಕೂ ಹೆಚ್ಚು ರೈತರ ನೆರವಿಗೆ ಬರುವಂತೆ ಹಾಗೂ ಶೀಘ್ರ ಸಮಸ್ಯೆ ಬಗೆಹರಿಸುವಂತೆ ರೈತ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲಾ, ಅತೀವೃಷ್ಟಿ, ಅನಾವೃಷ್ಟಿಗಳಂತಹ ಪ್ರಕೃತಿ ವಿಕೋಪಗಳಿಂದ ನಾಡಿನ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದಿಗ್ದದ ಪರಿಸ್ಥಿತಿಯಲ್ಲಿ ದೇಶದ ಬೆನ್ನೆಲಬಾಗಿರುವ ರೈತರ ನೆರವಿಗೆ ಸರ್ಕಾರಧಾವಿಸಬೇಕು.

ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಹಸಿರು ಪಟ್ಟಿಯಲ್ಲಿರುವ, ಹಸಿರು ಪಟ್ಟಿಗೆ ಒಳಪಡುವ ಹಾಗೂ ಉಳಿತಾಯ ಖಾತೆ ತಪ್ಪಾಗಿರುವ ಪ್ರಕರಣಗಳನ್ನೂ ಸಹ ಪರಿಗಣನೆಗೆ ತೆಗೆದುಕೆಂಡು ಉಳಿದ ರೈತರ ಸಾಲಮನ್ನಾಮಾಡಬೇಕೆಂದು ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಸಾಲಮನ್ನಾ ಪಟ್ಟಿಯಲ್ಲಿದ್ದರೂ ಕೆಲವು ರೈತರಿಗೇಕೆ ಸಿಗಲಿಲ್ಲ ಸಾಲಮನ್ನಾ ಭಾಗ್ಯ ಇಲ್ಲಿದೆ ಮಾಹಿತಿ

2018 ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸಾಲಮನ್ನಾ ಘೋಷಣೆ ಮಾಡಿದರು. ಸಾಲಮನ್ನಾಪಟ್ಟಿಯಲ್ಲಿದ್ದರೂ ಸಾಲಮನ್ನಾ ಭಾಗ್ಯಸಿಗಲಿಲ್ಲ. ಇನ್ನೂ ಕೆಲವು ರೈತರ ಹೆಸರು ಸಾಲಮನ್ನಾಪಟ್ಟಿಯಲ್ಲಿಲ್ಲ. ಯಾವ ಕಾರಣದಿಂದ ಸಾಲಮನ್ನಾ ಭಾಗ್ಯ ಸಿಗಲಿಲ್ಲವೆಂಬುದು ತಿಳಿಯಬೇಕೆ? ಇಲ್ಲಿದೆ ಮಾಹಿತಿ.

ಬೆಳೆಸಾಲ ಪಡೆಯುವ ರೈತರು ಆಯಾ ಸಹಕಾರ ಸಂಸ್ಥೆ ಅಥವಾ ಬ್ಯಾಂಕುಗಳಲ್ಲಿ ಪಹಣಿ ಪತ್ರಿಕೆ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆ ನೀಡಬೇಕಿತ್ತು.ಹಲವು ರೈತರು ಸಾಲಕ್ಕೆ ಅರ್ಜಿಸಲ್ಲಿಸುವಾಗ ನೀಡಿದ ಪಡಿತರ ಚೀಟಿಯನ್ನು ಕೆಲ ತಿಂಗಳ ನಂತರ ಬದಲಿಸಿಕೊಂಡಿದ್ದರು. ಕೆಲವರು ಹೆಸರು ಪಹಣಿ ಪತ್ರಿಕೆಯಲ್ಲಿ ಒಂದಿದ್ದರೆ, ಉಳಿದ ದಾಖಲೆಯಲ್ಲಿ ಬೇರೆ ಇದೆ. ಆಧಾರ್ ಕಾರ್ಡ್ ನಲ್ಲಿನ ದೋಷವೂ ಸಮಸ್ಯೆಯಾಗಿದೆ.

ಸಾಲಮನ್ನಾಕ್ಕೆ ಅರ್ಜಿ ಪರಿಗಣಿಸುವಾಗ ಇವು ಪತ್ತೆಯಾದ ಪರಿಣಾಮ ಅರ್ಜಿಗಳು ತಿರಸ್ಕೃತಗೊಂಡಿವೆ. ಕೆಲವು ರೈತರು ಒಂದಕ್ಕಿಂತ ಹೆಚ್ಚು ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆಂದು ರೈತರ ಹೆಸರನ್ನುಸಾಲಮನ್ನಾ ಪಟ್ಟಿಯಿಂದ ಕೈಬಿಡಲಾಗಿತ್ತು.  2018ರ ಜುಲೈ 10 ರೊಳಗೆ ಸಾಲ ಪಡೆದವರಿಗೆ ಸಾಲ ಮಾಡಲಾಗುವುದು ಎಂದು ಸೂಚಿಸಲಾಗಿತ್ತು.  ಆದರೆ ಈ ದಿನಾಂಕಕ್ಕೆ ಒಂದೆರಡು ದಿನಗಳ ಹಿಂದೆ ಪಡಿತರ ಚೀಟಿ ಮಾಡಿಸಿಕೊಂಡ ರೈತರ ಹೆಸರನ್ನೂ ಸಹ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬೇರೆ ಬೇರೆ ಕಾರಣಗಳಿಂದ ರೈತರು ಸಾಲಮನ್ನಾ ಭಾಗ್ಯದಿಂದ ಉಳಿದುಕೊಂಡಿದ್ದಾರೆ.

ಸಾಲಮನ್ನಾ ಪಟ್ಟಿಯಲ್ಲಿದ್ದರೂ ನಿಮಗೇಕೆಸಾಲಮನ್ನಾ ಸಿಕ್ಕಿಲ್ಲ ಚೆಕ್ ಮಾಡಬೇಕೆ? ಇಲ್ಲಿ ಕ್ಲಿಕ್ ಮಾಡಿ

ಸಾಲಮನ್ನಾ ಪಟ್ಟಿಯಲ್ಲಿದ್ದರೂ ನಿಮಗೆ ಸಾಲಮನ್ನಾ ಭಾಗ್ಯ ಏಕೆ ಸಿಗಲಿಲ್ಲವೆಂಬುದನ್ನುಚೆಕ್ ಮಾಡಲು ಈ

https://clws.karnataka.gov.in/clws/bank/fsd_report/BANK_IFR.aspx/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆಸಾಲಮನ್ನಾಪಟ್ಟಿ ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ಬೆಳೆ ಸಾಲ ಪಡೆದ ಬ್ಯಾಂಕ್, ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಿದರೆ ಸಾಕು, ಯಾವ ಬ್ಯಾಂಕಿನಲ್ಲಿ  ಸಾಲ ಪಡೆದಿದ್ದೀರಿ, ರೈತರ ಹೆಸರು ಸಾಲಮನ್ನಾ ಹಸರು ಪಟ್ಟಿಯಲ್ಲಿದೆಯೇ? ಸಾಲಮನ್ನಾ ಭಾಗ್ಯ ಪಡೆಯಲು ಯಾವ ದಾಖಲೆ ಸರಿಹೊಂದಿಲ್ಲ ಎಂಬಿತ್ಯಾದಿ ಮಾಹಿತಿ ಸಿಗುತ್ತದೆ.

LEAVE A RESPONSE

Your email address will not be published. Required fields are marked *