ಪಿ ಎಂ ಕಿಸಾನ್ ಯೋಜನೆಯ ಅರ್ಹ ಮತ್ತು ಅನರ್ಹ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಿ…
ನಮಸ್ಕಾರ ರೈತ ಬಾಂಧವರೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹರ ಮತ್ತು ಅನರ್ಹರ ಪಟ್ಟಿ ಬಿಡುಗಡೆಯಾಗಿದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ ಮುಂದಿನ ಕಂತಿನ ಹಣ ನಿಮಗೆ ಜಮೆಯಾಗುವುದೇ ಇಲ್ಲವೆ ಇದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಯೋಜನೆಗೆ ನೋಂದಣಿ ಮಾಡಿದ ಫಲಾನುಭವಿಗಳು ಅರ್ಹ ಪಟ್ಟಿಯಲ್ಲಿbಇದ್ದೀರೋ ಎಂದು ಅಥವಾ ಇಲ್ಲವೇ ಎಂದು ತಮ್ಮ ಮೊಬೈಲ್ನಲ್ಲೇ ಮಾಡಿಕೊಳ್ಳಬಹುದು. ಪಿಎಂ ಕಿಸಾನ್ ಪಟ್ಟಿಯನ್ನು ಚೆಕ್ ಮಾಡಿಸಲು ಯಾವುದೇ ಕಡೆ ಹೋಗುವಂತಿಲ್ಲ.
ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಕೇವಲ ಎರಡು ನಿಮಿಷಗಳಲ್ಲಿ ಚೆಕ್ ಮಾಡಬಹುದು ಚೆಕ್ ಮಾಡಲು ಪೂರ್ತಿಯಾಗಿ ಓದಿ.
ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ?
ಫಲಾನುಭವಿಗಳು ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಚೆಕ್ ಮಾಡಲು ನಾವು ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೊಂದು ಪುಟ ತೆಗೆದುಕೊಳ್ಳುತ್ತದೆ. ನಂತರ ಆ ಪುಟದಲ್ಲಿ ನಿಮ್ಮ ರಾಜ್ಯ ನಿಮ್ಮ ತಾಲೂಕು ನಿಮ್ಮ ಜಿಲ್ಲೆ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು ಮತ್ತೊಂದು ಪುಟ ಓಪನ್ ಆಗುತ್ತದೆ. ಆ ಪುಟದಲ್ಲಿ ಕೆಲವು ಆಯ್ಕೆಗಳು ಇರುತ್ತವೆ, ಅದರಲ್ಲಿ ಆಧಾರ್ ಅಟ್ಟೆಂಡಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಸಕ್ಸೆಸ್ಫುಲ್ಲಿ ಅಟೆಂಡ್ ಎಂದು ಕಾಣುತ್ತದೆ. ಇತರ ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಅರ್ಹರಾಗಿರುತ್ತೀರಿ.
ಇದೇ ರೀತಿ ಟೋಟಲ್ ಇಂಟನ್ಘಿಬಲ್ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯಲ್ಲಿರುವವರಿಗೆ ಪಿಎಂ ಕಿಸಾನ್ನ ಹಣ ಜಮೆ ಆಗುವುದಿಲ್ಲ. ನೀವು ಪಿಎಂ ಕಿಸಾನ್ ಅರ್ಹತಾ ಪಟ್ಟಿಯಲ್ಲಿದ್ದರೂ ಹಣ ಜಮೆಯಾಗುತ್ತಿಲ್ಲವಾದರೆ ಒಮ್ಮೆ ನಿಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ.
ಉದಾಹರಣೆಗೆ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜಮೀನಿನ ದಾಖಲೆ ಮತ್ತು ಆರ್ ಟಿ ಸಿ ಯಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ತಂದೆ ಹೆಸರು ಒಂದೇ ರೀತಿಯಾಗಿರಬೇಕು.
ಮತ್ತು ಈಕೆ ವೈಸಿ ಯನ್ನು ಕಡ್ಡಾಯವಾಗಿ ಮಾಡಿಸಿರಲೇಬೇಕು. ಈ ಎಲ್ಲಾ ದಾಖಲೆಗಳು ಪಕ್ಕ ಇದ್ದರೆ ಜಮಾ ಆಗುವುದು ಖಚಿತ ಇಲ್ಲವಾದಲ್ಲಿ ನಿಮಗೆ ಪಿಎಂ ಕಿಸಾನ್ ಹಣ ಜಮಾ ಆಗುವುದಿಲ್ಲ. ಇ ಕೆ ವೈಸಿ ಯನ್ನು ಕಡ್ಡಾಯ ಮಾಡಲಾಗಿದೆ. ಈಕೆ ವೈ ಸಿ ಮಾಡುವುದು ಕಡ್ಡಾಯವೆಂದು ಗ್ರಾಮ ಪಂಚಾಯಿತಿಯಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ರೈತರು ಆಯಾ ಗ್ರಾಮ ಪಂಚಾಯತಿಯಲ್ಲಿ ಹೋಗಿ ಇ ಕೆ ವೈ ಸಿ ಆಗಿದೆಯೋ ಇಲ್ಲವೆಂದು ಚೆಕ್ ಮಾಡಬಹುದು. ಇಲ್ಲವಾದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಿಕೊಳ್ಳಬಹುದು. ಈಕೆವಹಿಸಿಯನ್ನು ತಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಗೂಗಲ್ ನಲ್ಲಿ ಪಿಎಂ ಕಿಸಾನ್ ಈಕೆ ವೈ ಸಿ ಎಂದು ಟೈಪ್ ಮಾಡಿ.
ಓಪನ್ ಆದ ಪುಟದಲ್ಲಿ ಓಟಿಪಿ ಬೇಸ್ಡ್ ಈಕೆ ವೈ ಸಿ ಯ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಈಕೆ ವೈ ಸಿ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳುವುದು.