April 22, 2021

ಪೊಲೀಸ್ ಧ್ವಜ ದಿನಾಚರಣೆ: ಸಮಾಜದ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ – ನಿವೃತ್ತ ಪಿ.ಎಸ್.ಐ. ಸಣ್ಣಮನಿ

ಹಾವೇರಿ: ಪೊಲೀಸರ ಸೇವೆ ಬಹಳ ಪ್ರಮುಖವಾಗಿದೆ. ಸಮಾಜ ಪೊಲೀಸರಮೇಲಿಟ್ಟಿರುವ ನಂಬಿಕೆಯಂತೆ ನಾವು ಕರ್ತವ್ಯದ ಬಗ್ಗ್ಗೆ ಗೌರವಭಾವಹೊಂದರಿಬೇಕು ಎಂದು ನಿವೃತ್ತ ಪಿ.ಎಸ್.ಐ. ಡಿ.ಎಸ್.ಸಣ್ಣಮನಿ ಅವರು ಹೇಳಿದರು.

ಕೆರಿಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಜರುಗಿದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಿವೃತ್ತಿ ನಂತರವೂ ಕರೆದು ಗೌರವ ನೀಡುತ್ತಿರುವುದು ಪೊಲೀಸ್ ಇಲಾಖೆಯಲ್ಲಿ ಮಾತ್ರ. ಇದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಹೇಳಿದರು.

ವಿವಿಧ ಹುದ್ದೆಗಳಿಗೆ ಸರಕಾರದಿಂದ ನೇಮಕಾತಿ ಆದೇಶ

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ನಾವು ಒತ್ತಡದಿಂದ ಕಾರ್ಯನಿರ್ವಹಿಸುತ್ತೇವೆ. ಈ ಕರ್ತವ್ಯದ ಒತ್ತಡದಲ್ಲಿ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಪ್ರೀತಿ ವಾತ್ಸಲ್ಯದಿಂದ ಸಮಯ ಕಳೆಯಬೇಕು, ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಗಮನ ನೀಡಬೇಕು. 2 ಏಪ್ರಿಲ್ 1965 ರಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ.

ಹೆಚ್ಚುವರಿ ಪೊಲೀಸ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ವರದಿ ವಾಚಿಸಿ, ಧ್ವಜ ದಿನಾಚರಣೆ ದಿನದಂದು ಸಂಗ್ರಹಿಸಲಾದ ನಿಧಿಯನ್ನು ಪೊಲೀಸರ್ ಕಲ್ಯಾಣ ನಿಧಿಗೆ ಜಮೆ ಮಾಡಲಾಗುತ್ತದೆ. ಈ ಹಣವನ್ನು ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಶವ ಸಂಸ್ಕಾರ, ಆರೋಗ್ಯ ಚಿಕಿತ್ಸೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಯಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್.ಪಿ.ಆಯ್ ಮಾರುತಿ ಹೆಗಡೆ ಕವಾಯತ ನೇತೃತ್ವ ವಹಿಸಿದ್ದರು. ಹಾವೇರಿ ಡಿ.ವಾಯ್.ಎಸ್.ಪಿ ಶಂಕರ ಮಾರಿಹಾಳ ಸ್ವಾಗತಿಸಿದರು, ರಾಣೇಬೆನ್ನೂರು ಡಿ.ವಾಯ್.ಎಸ್.ಪಿ ಟಿ.ವಿ.ಸುರೇಶ ವಂದಿಸಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!