April 22, 2021

ಮತ್ತೆ ಸದ್ದು ಮಾಡಿದ ಪುಲ್ವಾಮ: ಭಾರತೀಯ ಯೋಧರಿಂದ ಮೂವರು ಉಗ್ರರ ಬೇಟೆ..!

ಶ್ರೀನಗರ,ಏ.2: ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಪೋರದಲ್ಲಿ ಯೋಧರು ಹೊಡೆದುರುಳಿಸಿದ್ದಾರೆ.

ನೌಗಾಮಾದ ಬಿಜೆಪಿ ಮುಖಂಡ ಅನ್ವರ್‌ ಅಹ್ಮದ್‌ ಮನೆ ಮೇಲೆ ನಾಲ್ವರು ಉಗ್ರರ ತಂಡ ಗುರುವಾರ ದಾಳಿ ನಡೆಸಿತ್ತು. ಅದರಲ್ಲಿ ಪೊಲೀಸ್‌ ಅಧಿಕಾರಿ ರಮೀಜ್‌ ರಾಜಾ ಮೃತಪಟ್ಟಿದ್ದರು. ದಾಳಿಕೋರ ಉಗ್ರರನ್ನು ಹುಡುಕಲು ಯೋಧರು ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದಾಗ ಮನೆಯೊಂದರಲ್ಲಿ ಅಡಗಿಕೊಂಡಿರುವುದು ತಿಳಿದುಬಂದಿದೆ.

ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸರಕಾರದಿಂದ ಹೊರಡಿಸಿರುವ ನೇಮಕಾತಿ ಆದೇಶಗಳು..!

ಶರಣಾಗುವಂತೆ ಹೇಳಿದರೂ ಒಪ್ಪದ ಉಗ್ರರು ಗುಂಡು ಹಾರಿಸಿದ್ದಾರೆ. ಆಗ ಯೋಧರು ಪ್ರತಿದಾಳಿ ಮಾಡಿದ್ದು, ಸುಮಾರು ಒಂದು ಗಂಟೆ ಕಾಲ ಗುಂಡಿನ ಚಕಮಕಿ ನಡೆದಿದೆ. ಕೊನೆಗೆ ಮನೆಯಲ್ಲಿದ್ದ ಎಲ್ಲಾ ಮೂರು ಉಗ್ರರನ್ನು ಹತ್ಯೆ ಮಾಡುವುದರಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.

ಹತ್ಯೆಯಾದ ಮೂವರು ಉಗ್ರರಲ್ಲಿ ಇಬ್ಬರು ಮಾತ್ರ ಬಿಜೆಪಿ ಮುಖಂಡರ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇನ್ನಿಬ್ಬರು ಉಗ್ರರಿಗಾಗಿ ಹುಡುಕಾಟ ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ಸೇನೆ ತಿಳಿಸಿದೆ. ಉಗ್ರರ ಬಳಿಯಿದ್ದ ಶಸ್ತ್ರಗಳು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪುಲ್ವಾಮ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!