July 25, 2021

ನನಗೆ ನನ್ನ ಹೆಂಡ್ತಿ ಬೇಕು, ಹುಡುಕಿಕೊಡಿ: 6 ತಿಂಗಳ ಗರ್ಭಿಣಿ ಕಿಡ್ನ್ಯಾಪ್..! ಪೊಲೀಸರ ವೇಷದಲ್ಲಿ ಅಪಹರಣ..?

ಎಂಟು ದಿನಗಳಾದ್ರೂ ಪತ್ತೆಯಾಗಿಲ್ಲ ಅಪಹರಣಕ್ಕೊಳಗಾದ ಪತ್ನಿ: ಆತಂಕದಲ್ಲಿ ಪತಿ!

ಹಾವೇರಿ,ಏ.3-ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಜೀವನ ಸಾಗಿಸುತ್ತಿದ್ದ ನೂತನ ದಂಪತಿಯ ಸಂಸಾರವು ಅಲ್ಲೋಲ ಕಲ್ಲೋಲವಾಗಿದ್ದು, ಕಿಡ್ನಾಪ್‌ ಆಗಿರುವ ಪತ್ನಿಯನ್ನು ಹುಡುಕಲಾಗದೇ ಪತಿ ಪರದಾಡುವಂತಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ನಿವಾಸಿ 29 ವರ್ಷದ ವಿರೇಶ ಅಡಿವೆಪ್ಪನವರ್‌ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. 2020ರ ಜೂನ್‌ 28ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಆಕೆ ಗರ್ಭಿಣಿ ಕೂಡ ಆಗಿದ್ದಳು. ಆದರೆ ಮಗಳು ಪ್ರೀತಿಸಿದ್ದು, ಮದುವೆಯಾಗಿದ್ದು, ಗರ್ಭಿಣಿಯಾಗಿದ್ದು ಮಾತ್ರ ಯುವತಿಯ ಪೋಷಕರಿಗೆ ಗೊತ್ತಾಗಿರಲಿಲ್ಲ.

ವಿವಿಧ ಹುದ್ದೆಗಳಿಗೆ ಸರಕಾರದಿಂದ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ CLICK ಮಾಡಿ..

ಮಾರ್ಚ್‌ 10, 2021ರಂದು ರಾಣೆಬೆನ್ನೂರಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇಬ್ಬರೂ ಸೇರಿ ಮದುವೆಯ ನೋಂದಣಿ ಮಾಡಿಸಿದ್ದಾರೆ. ನಂತರವಷ್ಟೇ ಯುವತಿಯ ಪೋಷಕರಿಗೆ ಮದುವೆಯ ವಿಷಯ ತಿಳಿಸಿದ್ದಾರೆ.
ಇಂದಿಗೆ ಎಂಟು ದಿನಗಳ ಹಿಂದೆಯಷ್ಟೇ ವೀರೇಶ್‌ ತಮ್ಮ ಪತ್ನಿಯನ್ನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊಟ್ಟೂರಿನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ದೇವರ ದರ್ಶನದ ನಂತರ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಪೊಲೀಸರೆಂದು ಹೇಳಿಕೊಂಡು ಅಲ್ಲಿಗೆ ಬಂದ ನಾಲ್ವರು ಆ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಪತ್ನಿ ಅಪಹರಣಕ್ಕೆ ಒಳಗಾಗಿದ್ದರಿಂದ ನೊಂದ ಪತ್ನಿಯು ರಾಣೆಬೆನ್ನೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಂಟು ದಿನಗಳಾದರೂ ಗರ್ಭಿಣಿ ಪತ್ತೆಯಾಗದಿರುವುದು ಯುವಕನ ಕುಟುಂಬ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಒಂದುವೇಳೆ ಆಕೆ ಸುರಕ್ಷಿತವಾಗಿ ಇಲ್ಲದಿದ್ದರೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಮೇಲೂ ಇದು ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಪೊಲೀಸರು ಕೂಡಲೇ ಪ್ರಕರಣವನ್ನು ಭೇದಿಸಿ ದಂಪತಿಗಳನ್ನು ಒಂದುಗೂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ.

Share this News
error: Content is protected !!