July 25, 2021

ಮಹಿಳೆ ಅಬಲೆಯಲ್ಲ ಸಬಲೆ: ಕೃಷಿ ಸಚಿವ ಬಿ.ಸಿ.ಪಾಟೀಲ

ಹಿರೆಕೇರೂರ: ಮಹಿಳೆಯರು ಪುರುಷರಷ್ಟೆ ಸಬಲರಾಗಿದ್ದು ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೆ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯ ಎಂದಿಗೂ ಅಬಲೆಯಲ್ಲ ಸಬಲೆಯಾಗಿದ್ದಾಳೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ಗುರುಭವನದಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಮಹಿಳೆಯರು ಕೇವಲ ಅಡುಗೆಯ ಮನೆಗೆ ಸಿಮೀತವಾಗಿದ್ದರು. ಆದರೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುಹುದನ್ನು ತೋರಿಸಿದ ಅನೇಕ ಸ್ವಾತಂತ್ರ್ಯ ಹೋರಾಟಗಾರ್ತಿಯರು ರಾಜಕೀಯ ಮಹನೀಯರು ನಮ್ಮ ನಾಡಿನಲ್ಲಿದ್ದಾರೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ಮಹಿಳೆಯರು ದೈರ್ಯಶಾಲಿಯಾಗಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತ ಕಾರ್ಯವಾಗಲಿ ಪ್ರಸ್ತುತ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರ ಸರ್ವಾಂಗೀಣ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ ಅವುಗಳನ್ನು ಮಹಿಳೆಯರು ಸಮರ್ಥ ವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಅಖಿಲ ಭಾರತ ವೀರಶೈವ ಮಹಾಸಭೆಯಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಬಿ.ವೈ ಅರುಣಾದೇವಿ, ಯುವ ನಾಯಕಿ ಸೃಷ್ಟಿ ಪಾಟೀಲ, ಎಸ್.ಎಸ್. ಪಾಟೀಲ , ಜಿ.ಪಂ ಸದಸ್ಯರಾದ ಸುಮಿತ್ರಾ ಪಾಟೀಲ , ಹಿರೇಕೆರೂರ ತಹಶೀಲ್ದಾರ ಉಮಾ ಇತರರಿದ್ದರು.

Share this News
error: Content is protected !!