ಹಾವೇರಿ- 2007ರಲ್ಲಿ ಸಿ.ಎಂ.ಉದಾಸಿ ಮಂತ್ರಿ ಆಗಿದ್ದ ವೇಳೆ ಹಿಂದಿನ ಪೂಜ್ಯರ ಭಾವನೆಯಂತೆ ಕೆಎಲ್ಇ ಸಂಸ್ಥೆಗೆ ಭೂಮಿ ನೀಡಿದೆ. ಹಿಂದಿನ ಸ್ವಾಮೀಜಿ ಹೆಸರು ಅಜರಾಮರ ಆಗಿಸಲು ಮೆಡಿಕಲ್ ಕಾಲೇಜಿಗೆ ಭೂಮಿ ನೀಡಲಾಗಿದೆ. ಮೂರು ಸಾವಿರ ಮಠದ ಹಿಂದಿನ ಶ್ರೀಗಳ ಇಚ್ಛೆಯಂತೆಯೆ ಎಲ್ಲರೂ ಸೇರಿ ತೀರ್ಮಾನ ಮಾಡಿದ್ದೆವು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಮೂರು ಸಾವಿರ ಮಠದ ಆಸ್ತಿಯ ವಿಚಾರವಾಗಿ ಹಾವೇರಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ಅಖಂಡ ಧಾರವಾಡ ಜಿಲ್ಲೆಯ ಶಾಸಕರು ಸೇರಿ ಮಠದ ಪೂಜ್ಯರ ಇಚ್ಚೆಯಂತೆ ಭೂಮಿ ಕೊಟ್ಟಿದ್ದೇವೆ. ಅದು ಆಗಿದೆ, ಎಲ್ಲರೂ ಕೂಡಿ ತೀರ್ಮಾನ ಮಾಡಿದ್ದದು. ಬೆಂಗಳೂರಲ್ಲಿ ಉದಾಸಿಯವರ ಮನೆಯಲ್ಲಿ ಈ ತೀರ್ಮಾನ ಆಗಿತ್ತು. ನಾಲಿಗೆ ಒಂದೆ ಇರಬೇಕು, ಹೀಗಾಗಿ ಗೊತ್ತಿದ್ದನ್ನ ಹೇಳಿದ್ದೇನೆ ಎಂದರು.
ಇನ್ನು ಸಭಾಪತಿ ಆಗಿದ್ದಕ್ಕೆ ಶಿಕ್ಷಕರಿಗೆ ಮಾತ್ರವಲ್ಲ ಈಡಿ ಉತ್ತರ ಕರ್ನಾಟಕ ಭಾಗಕ್ಕೆ ಬಹಳ ಹೆಮ್ಮೆಯಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಸೇರಿಕೊಂಡು ದೊಡ್ಡ ಜವಾಬ್ದಾರಿ ಸ್ಥಾನ ಕೊಟ್ಟಿದ್ದಾರೆ. ಸಂದಿಗ್ದ ಪರಿಸ್ಥಿತಿಯಲ್ಲಿ ಸಭಾಪತಿ ಸ್ಥಾನ ಸಿಕ್ಕಿದೆ, ಅದನ್ನ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವೆ. ಕರ್ನಾಟಕ ಇತಿಹಾಸದಲ್ಲಿ ಹೊರಟ್ಟಿ ಇಂಥಾ ಕಾಲದಲ್ಲಿ ಸಭಾಪತಿಯಾಗಿದ್ದರು ಎನ್ನುವಂತೆ ಕೆಲಸ ಮಾಡಿ ತೋರಿಸೋ ಬಗ್ಗೆ ಚಾಲೆಂಜ್ ಆಗಿ ತಗೊಂಡಿದ್ದೇನೆ ಎಂದು ಹೇಳಿದರು.
More Stories
ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆ – ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ
ತವರು ಮನೆಗೆ ಬಂದಿದ್ದ ಅಜ್ಜಿಗೆ, ಯಮನ ರೂಪದಲ್ಲಿ ಕಾಡಿದ ಮನೆಯ ಮೇಲ್ಚಾವಣಿ.