July 25, 2021

ಹೆಣ್ಣು ಮಗುವಿಗೆ ಜನ್ಮ: ಗೃಹಣಿಗೆ ಪತಿ ಮನೆಯವರಿಂದ ಕಿರುಕುಳ, ಗೃಹಬಂಧನದ ಆರೋಪ..?

ಹಾವೇರಿ: ಪತಿ ಹಾಗೂ ಆತನ ಮನೆಯವರಿಂದ ಪ್ರತಿದಿನ ಕಿರುಕುಳ ಹಾಗೂ ಮಾನಸಿಕ ದೈಹಿಕ ಹಲ್ಲೆಗೊಳಗಾದ ಗೃಹಣಿಯೊರ್ವಳು ಪತಿ ಮನೆಯವರಿಂದ ರಕ್ಷಣೆ ಕೋರಿ ಪೂಲೀಸ ಠಾಣೆಯ ಮೆಟ್ಟಿಲಿರುವ ಘಟನೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಕದ ಕಣದ ನಿವಾಸಿ ಜ್ಯೋತಿ ಶಡಗರವಳ್ಳಿ ಕಿರುಕುಳಕ್ಕೆ ಒಳಗಾಗಿರುವ ಗೃಹಿಣಿ.

ಕಳೆದ ನಾಲ್ಕು ವರ್ಷಗಳ ಹಿಂದೆ ಸವಣೂರ ಪಟ್ಟಣದ ಜ್ಯೋತಿ ಬಂಕಾಪುರದ ಶಂಭಾಜಿ ಶಡಗರವಳ್ಳಿ ಯೊಡನೆ ವಿವಾಹವಾಗಿದ್ದಳು. ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣದಿಂದ ಕೆಲ ತಿಂಗಳಿನಿಂದ ಪತಿ ಹಾಗೂ ಆತನ ತಂದೆ ತಾಯಿಯ ಸೇರಿ ಗೃಹಿಣಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಾ ಬಂದಿದ್ದಾರೆ. ಶನಿವಾರ ಪತಿ ಹಾಗೂ ಆತನ ತಂದೆ ದುರಗಪ್ಪ ಆತನ ತಾಯಿ ತಾರಾಬಾಯಿ ಸೇರಿಕೊಂಡು ಜ್ಯೋತಿಯ ಕ್ಷುಲ್ಲಕ ಕಾರಣಕ್ಕೆ ಆವಾಚ್ಯ ಶಬ್ದದಗಳಿಂದ ನಿಂದಿಸಿ ಅವಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ.

ಇದರಿಂದ ಗಾಯಗೊಂಡ ಗೃಹಿಣಿ ತನ್ನ ಜೀವ ರಕ್ಷಣೆಗಾಗಿ ಕೂಗಿ ಕೊಂಡಿದ್ದಾಳೆ.ಆಗ ಸ್ಥಳೀಯ ನಿವಾಸಿಗಳು ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಗೃಹಿಣಿ ಬಂಕಾಪುರ ಪೂಲೀಸ್ ಠಾಣೆಗೆ ತೆರಳಿ ಪತಿ ಹಾಗೂ ಆತನ ಮನೆಯವರ ವಿರುದ್ದ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಆಕೆಯ ಪತಿ ಶಂಭಾಜಿ ಹಾಗೂ ಕುಟುಂಬಸ್ಥರ ಪ್ರಕರಣ ದಾಖಲಿಸಿಕೊಂಡಿದ್ದಾರೆ

Share this News
error: Content is protected !!