ವಿಜಯಪುರ: ನಲವತ್ತು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದೊಂದಿಗೆ ಅಕ್ಷರಶಃ ಬಿಸಿಲೂರಾಗಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಪ್ರತಿದಿನವೂ ದಾರಿಹೋಕರಿಗೆ ಕುಡಿಯುವ ನೀರು ನೀಡುವ ಮೂಲಕ ಬಸಪ್ಪ ಮರಳಪ್ಪಮನವರ ಎಂಬುವವರು ಮಾದರಿಯಾಗಿದ್ದಾರೆ.
ಸಾರ್ವಜನಿಕರ ಪಾಲಿಗೆ ʻಆಧುನಿಕ ಭಗೀರಥʼ ಆಗಿರುವ ಬಬಲೇಶ್ವರದ ಬಸಪ್ಪ ಮರಳಪ್ಪಮನವರ ಕಳೆದ 30 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಿದ್ದಾರೆ. ಈ ವರ್ಷದ ಬೇಸಿಗೆಯಲ್ಲೂ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆ. ಪಟ್ಟಣದ ವಿವಿಧ ಭಾಗಗಳಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಿ ಮೂರು ಹೊತ್ತು ನೀರು ತುಂಬಿಸುತ್ತಿದ್ದಾರೆ.
ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ
ಬಿಸಿಲಿನಲ್ಲಿ ಬಳಲುತ್ತಿರುವವರಿಗೆ ನೀರು ನೀಡುವುದನ್ನು ಪುಣ್ಯದ ಕೆಲಸವೆಂದು ಭಾವಿಸಿರುವ ಬಸಪ್ಪನವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಸುತ್ತಮುತ್ತಲಿನ ಗಣ್ಯರು, ಸಮಾಜ ಸೇವಕರು ಹಾಗೂ ಸ್ಥಳೀಯರಿಂದ ಬಸಪ್ಪನವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
More Stories
ಯಾರ್ರೀ, ವಿಜಯೇಂದ್ರ..? ಅವನೇನು ದೇವಲೋಕದಿಂದ ಇಳಿದು ಬಂದಿದ್ದಾನಾ..? -ಸಿದ್ದರಾಮಯ್ಯ