ಚನ್ನರಾಯಪಟ್ಟಣ: ಯಾರ್ರೀ ವಿಜಯೇಂದ್ರ ಆತ ಏನು
ದೇವಲೋಕದಿಂದ ಇಳಿದು ಬಂದಿದ್ದಾನಾ. ನಾವು ಎಂಟು ಬಾರಿ ಗೆದ್ದಿದ್ದೇವೆ ಹಾಗಿದ್ರೆ ನಾವ್ಯಾರು. . ? ಒಂದೇ ಒಂದು ಚುನಾವಣೆಯಲ್ಲಿ ಗೆದ್ದಿದ್ದಾನಾ ಅವನು. . ? ದುಡ್ಡು ಹಂಚುವುದರಲ್ಲಿ ಆತ ಚಾಣಕ್ಯನೇ ಹೊರತು ಬೇರೆ ಯಾವುದರಲ್ಲೂ ಅಲ್ಲ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಉಪಚುನಾವಣೆಯ ಉಸ್ತುವಾರಿ ವಹಿಸಿರುವ ವಿಜಯೇಂದ್ರ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಕ್ಕತ್ ಟಾಂಗ್ ಕೊಟ್ಟರು. ಖಾಸಗಿ ಕಾರ್ಯಕ್ರಮಕ್ಕೆ ಚನ್ನರಾಯಪಟ್ಟಣಕ್ಕೆ ಬಂದಿದ್ದ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ದುಡ್ಡು ಹಂಚುವುದರಲ್ಲಿ ಚಾಣಕ್ಯನ ಹೊರತು ಬೇರೆ ಯಾವುದರಲ್ಲೂ ಅಲ್ಲ. ಅವರ ಅಪ್ಪ ಯಡಿಯೂರಪ್ಪ ಕೆಜೆಪಿ ಪಕ್ಷ ಮಾಡಿದಾಗ ವಿಜಯೇಂದ್ರ ಎಲ್ಲಿಗೆ ಹೋಗಿದ್ದ. . ?
ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ
ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದರೆ ಅದರಲ್ಲಿ ಗೊತ್ತಾಗುತ್ತೆ ಇಲ್ಲಿ ಯಡಿಯೂರಪ್ಪ ಮತ್ತು ಆತನ ಮಗನ ಸರ್ಕಾರ ಅಂತ. ಒಂದೊಂದು ವೋಟಿಗೆ ಐದರಿಂದ ಆರು ಸಾವಿರ ರೂಪಾಯಿ ಕೊಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ದುಡ್ಡು ಹಂಚುವುದರಲ್ಲಿ ಮಾತ್ರ ವಿಜಯೇಂದ್ರ ಚಾಣಕ್ಯ ಎಂದು ವ್ಯಂಗ್ಯದಿಂದಲೇ ಮಾತನಾಡಿದರು.
ಡಿಕೆಶಿ ಪರ ಫುಲ್ ಬ್ಯಾಟಿಂಗ್..
ಇನ್ನು ಸಿಡಿ ಪ್ರಕರಣಕ್ಕೆ ಎಸ್ಐಟಿ ನೇಮಿಸಿರುವುದು ರಮೇಶ್ ಜಾರಕಿಹೊಳಿಯನ್ನು ರಕ್ಷಣೆ ಮಾಡಲಿಕ್ಕೆ, ಎಸ್ಐಟಿ ರಚನೆ ಮಾಡಿರೋದು ಬಿಜೆಪಿ ಸರ್ಕಾರ. ಸರ್ಕಾರ ಹೇಳಿದ ಹಾಗೆ ಪೊಲೀಸರು ಕೇಳುತ್ತಾರೆ. ಬೇರೆಯವರು ಆಗಿದ್ರೆ ಇಷ್ಟೊತ್ತಿಗೆ ಅರೆಸ್ಟ್ ಮಾಡಿರೋರು. ಎಂದವರು ಲಖನ್ ಜಾರಕಿಹೊಳಿ ಹೇಳಿಕೆಗೆ ಕೆಂಡಾಮಂಡಲವಾಗಿ ಮೊದಲು ದಾಖಲೆ ಇದ್ದರೆ ನೀಡಲಿ. ಕೇವಲ ಬಾಯಿಮಾತಿನಲ್ಲಿ ಹೇಳಿದರೆ ರಾಜೀನಾಮೆ ಕೊಡಲು ಸಾಧ್ಯವಿಲ್ಲ ಎಂದು ಡಿಕೆಶಿ ಪರ ಫುಲ್ ಬ್ಯಾಟಿಂಗ್ ಮಾಡಿದರು.
ಇನ್ನು ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಕಳೆದ ಸಾರಿ ಎರಡು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು ಈಗ ಮೂರು ಕಡೆ ಸ್ಪರ್ಧೆ ಮಾಡಿದ್ದು, ಮೂರರಲ್ಲೂ ನಾವು ಗೆಲ್ಲುವ ಅವಕಾಶ ಹೆಚ್ಚಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಮಾಡಿದ್ದಾರೆ. ಈ ಸರ್ಕಾರ 20 ಸಾವಿರ ಕೋಟಿ ಸಾಲ ತರುವ ಮೂಲಕ ರಾಜ್ಯವನ್ನು ದಿವಾಳಿ ಮಾಡುತ್ತಿದೆ. ನನ್ನ ಸರ್ಕಾರದಲ್ಲಿ ಮಾಡಿದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಕ್ಷೀರ ಕ್ರಾಂತಿ, ಯೋಜನೆಯನ್ನು ಹಂತಹಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ivnthara thirboki anthu alla. chaamundeshwari inda bagalkotege ododisdru buddhibandila.