July 25, 2021

ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು: ಹಾನಗಲ್ ತಾಲೂಕಿನ ಮಂತಗಿಯಲ್ಲಿ ಘಟನೆ..!

ಹಾವೇರಿ – ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.‌

ಮೃತ ಬಾಲಕರನ್ನ ಅಖ್ತರ್ ರಜಾ ಯಳವಟ್ಟಿ 16 ವರ್ಷ, ಅಹ್ಮದ ರಜಾ ಅಂಚಿ 16 ವರ್ಷ ಮತ್ತು ಸಾಹಿಲ್ ಡೊಂಗ್ರಿ 17 ವರ್ಷ ಮೃತ ಬಾಲಕರು ಎಂದು ಗುರುತಿಸಲಾಗಿದೆ. ಮೂವರು ಸೇರಿಕೊಂಡು ಗ್ರಾಮದ ಬಳಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸ್ಥಳೀಯರು ಮೂವರು ಬಾಲಕರ ಮೃತದೇೇಹವನ್ನು ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

_______

Share this News
error: Content is protected !!