April 22, 2021

22 ಮಂದಿ ಯೋಧರು ಹುತಾತ್ಮ: ಬಿಜಾಪುರ ಗಡಿ ಪ್ರದೇಶದಲ್ಲಿ ನಕ್ಸಲ್ ದಾಳಿ..!

ರಾಯಪುರ್: ಇಲ್ಲಿನ ಸುಕ್ಮಾ- ಬಿಜಾಪುರ ಗಡಿ ಪ್ರದೇಶದಲ್ಲಿ ಶನಿವಾರ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ 22ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ದಾಳಿ ನಡೆದ ಸಂದರ್ಭದಲ್ಲಿ ಐದು ಜನ ಸೈನಿಕರು ಸಾವನ್ನಪ್ಪಿದ್ದರು ಮತ್ತು 30 ಸೈನಿಕರು ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ 17 ಜನ ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಇದರಿಂದ ಹುತಾತ್ಮರದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇನ್ನೂಳಿದ 8 ಜನರ ಪತ್ತೆಗೆ ಶೋಧಕಾರ್ಯ ನಡೆದಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಸಿಆರ್‌ಪಿಎಫ್ ನ ಕೋಬ್ರಾ ಪಡೆ, ವಿಶೇಷ ಕಾರ್ಯಾಚರಣೆ ಪಡೆ, ಜಿಲ್ಲಾ ಮೀಸಲು ಗಾರ್ಡ್ಸ್‌ನ 2 ಸಾವಿರ ಸಿಬ್ಬಂದಿ ಛತ್ತೀಸ್‌ಗಡದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸುಕ್ಮಾ ಜಿಲ್ಲೆಯ ಜಾಗರ್‌ಗುಂಡಾ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು ಪಡೆಗಳನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ್ದಾರೆ. ನಂತರ ಭದ್ರತಾ ಪಡೆಗಳೂ ಪ್ರತಿ ದಾಳಿ ನಡೆಸಿವೆ.

ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ ಗಢ್ ಸಿಎಂ ಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗ ಮಾಹಿತಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿ, ಗಾಯಗೊಂಡ ಭದ್ರತಾ ಸಿಬ್ಬಂದಿಯ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಅಲ್ಲದೆ, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಯೋಧರ ಕುಟುಂಬದ ಜತೆ ನಾವಿರುತ್ತೇವೆಂದು ಟ್ವೀಟ್​ ಮೂಲಕ ಧೈರ್ಯ ತುಂಬಿದ್ದಾರೆ

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!