April 22, 2021

ಸಿದ್ದರಾಮಯ್ಯ ಹೇಳುವುದೆಲ್ಲಾ ವೇದಾಂತವಲ್ಲ. ಮೇಟಿ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟರು ಎಫ್.ಆಯ್.ಆರ್. ಆಗಿರಲಿಲ್ಲ-ಕೃಷಿ ಸಚಿವ ಬಿ.ಸಿ.ಪಾಟೀಲ.

ಹಾವೇರಿ – ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಏನಲ್ಲ. ಹಿಂದೆ ಮೇಟಿಯವರ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟಾಗ್ಲೂ ಎಫ್ಐಆರ್ ಆಗಿರಲಿಲ್ಲ ಎಂದು ಕೃಷಿ ಸಚಿವ‌ ಬಿ.ಸಿ.ಪಾಟೀಲ ಹೇಳಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು ನಮ್ಮ ಸರಕಾರ ಎಸ್ಐಟಿ ತನಿಖೆಗೆ ಸೂಚನೆ ಕೊಟ್ಟಿದೆ. ಆಮೇಲೆ ಸಂತ್ರಸ್ತೆ ಬಂದ್ಮೆಲೆ ಪ್ರಕರಣ ಕೂಡ ದಾಖಲಿಸಿದ್ದಾರೆ‌. ಅವಶ್ಯಕತೆ ಕಂಡುಬಂದರೆ, ತನಿಖೆಯಲ್ಲಿ ರಮೇಶ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅರೆಸ್ಟ್ ಮಾಡ್ತಾರೆ ಎಂದರು.

ಚಿತ್ರರಂಗಕ್ಕೆ ಕೊರೋನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರೋದಕ್ಕೆ ಸಚಿವ ಪಾಟೀಲ ಸಮರ್ಥನೆ‌ ಮಾಡಿಕೊಂಡಿದ್ದಾರೆ. ಚಿತ್ರರಂಗಕ್ಕೆ ಅತಿ ಅವಶ್ಯಕ ಇದೆ. ಎಲ್ಲರೂ ಕೂಡ ಮಾಸ್ಕ್ ಧರಿಸಬೇಕು ಅನ್ನೋ ಸೂಚನೆ ಕೊಟ್ಟಿದ್ದಾರೆ. ಕೊರೊನಾ ನಿಯಮ ಕಳೆದ ವರ್ಷದಂತೆ ಜನರು ಈಗ ಪಾಲನೆ ಮಾಡ್ತಿಲ್ಲ. ಜನರ ಜವಾಬ್ದಾರಿಯೂ ಬಹಳಷ್ಟಿದೆ. ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರ ಬಿಟ್ಟಿದ್ದಾರೆ. ಮುಂಜಾಗ್ರತಾ ಕ್ರಮ‌ ಕೈಗೊಂಡು ಮಾಡಬೇಕೆಂದು ಸಿಎಂ ಹೇಳಿರೋದು ಒಳ್ಳೆಯದೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದರು.

ಉಪಚುನಾವಣೆ ವೇಳೆ ಬಿಜೆಪಿ ನಾಯಕರ ಮನಸ್ತಾಪ ಆಗಿರೋ ವಿಚಾರಕ್ಕೆ ಮನೆಯೊಳಗೆ ಇದ್ದಾಗ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಇದನ್ನೆಲ್ಲ ಸರಿಪಡಿಸೋ ಕೆಲಸವನ್ನ ವರಿಷ್ಠರು ಮಾಡುತ್ತಾರೆ‌. ಎಲ್ಲ ಪಕ್ಷದಲ್ಲೂ ಸಣ್ಣಪುಟ್ಟ ಬಿನ್ನಾಭಿಪ್ರಾಯ ಇರುತ್ತವೆ.

ವಿಜಯೇಂದ್ರ ದೇವ ಲೋಕದಿಂದ ಬಂದಿದ್ದಾರಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಕಾಣುತ್ತದೆ. ಹಾಗೆ ಕಾಂಗ್ರೆಸ್ ನವರಿಗೆ ವಿಜಯೇಂದ್ರ ನೋಡಿದಾಕ್ಷಣ ಬೇರೆ ಬೇರೆ ಕಾಣುತ್ತಿದೆ.
ವಿಜಯೇಂದ್ರ ಯುವನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲೂ ಅವರು ಪ್ರಭಾವವನ್ನ ತೋರಿಸುತ್ತಾರೆ ಎಂದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!