July 25, 2021

ಅಪರಿಚಿತ ವಾಹನ ಡಿಕ್ಕಿ, ಇಬ್ಬರೂ ಬೈಕ್ ಸವಾರರು ದುರ್ಮರಣ: ಹಾನಗಲ್ ಶಿರಸಿ ರಸ್ತೆಯಲ್ಲಿ ಘಟನೆ..!

ಹಾನಗಲ್ಲ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರವಿವಾರ ಬೆಳಗಿನ ಜಾವ ಹಾನಗಲ್ ಶಿರಸಿ ರಸ್ತೆಯಲ್ಲಿ ನಡೆದಿದೆ. ಶಿರಸಿ ಪಟ್ಟಣದ ಆಸೀಮಸಾಬ್ ಚಂದಾವರ(19) ಹಾಗೂ ಮಹ್ಮದಜಾಕಿರಸಾಬ್ ಆಲೂರ(17) ಮೃತ ದುರ್ದೈವಿಗಳು.

ಆಸೀಮ್ ಸಾಬ್ ತನ್ನ ಸ್ನೇಹಿತ ಮಹ್ಮದ ಜಾಕಿರಸಾಬ ನೊಂದಿಗೆ ಹಾನಗಲ್ ನಿಂದ ಶಿರಸಿಗೆ ಬೈಕನಲ್ಲಿ ಬರುತ್ತಿರುವಾಗ ಶಿರಸಿ ಕಡೆಯಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಅಪಘಾತವಾದ ತಕ್ಷಣ ವಾಹನ ಸವಾರ, ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಯಾರು ಇಲ್ಲದ ಪರಿಣಾಮ ಯಾವ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದಿಲ್ಲ. ಈ ಸಂಬಂಧ ಹಾನಗಲ್ ಪೂಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this News
error: Content is protected !!