April 22, 2021

ಶಾಸಕ ಬಸವನಗೌಡ ಪಾಟೀಲ ಯತ್ನಾಳಗೆ ಮಾಡೋಕೆ ಕೆಲಸ ಇಲ್ಲ, ಯತ್ನಾಳ ಅವರನ್ನ ಕರೆದುಕೊಂಡು ಬಂದಿದ್ದು ಕೂಡ ಯಡಿಯೂರಪ್ಪನವರೆ. -ಬಿ.ಸಿ. ಪಾಟೀಲ

ದಾವಣಗೆರೆ- ಶಾಸಕ ಯತ್ನಾಳಗೆ ಮಾಡೋಕೆ ಕೆಲಸ‌ ಇಲ್ಲ. ಅವರ ಟೀಕೆಗಳಿಗೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ. ಹದಿನೇಳು ಜನಕ್ಕೆ ಮಾತ್ರವಲ್ಲ, ಎಲ್ಲರಿಗೂ ಸಿಎಂ ಅನುದಾನ ಕೊಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಉಕ್ಕಡಗಾತ್ರಿಯಲ್ಲಿ ಮಾತನಾಡಿದ ಅವರು ಈ ಹದಿನೇಳು ಜನರು ಬರದಿದ್ದರೆ ಇವತ್ತು ಬಿಜೆಪಿ ಸರಕಾರ ಬರುತ್ತಿರಲಿಲ್ಲ ಎಂಬುದನ್ನ ಯತ್ನಾಳ ಅರ್ಥ ಮಾಡಿಕೊಳ್ಳಲಿ. ಇಲ್ಲಾ ಅಂದರೆ ಇವರ ಲೆಟರ್ ಹೆಡ್ ಗಳಲ್ಲೆ ಧೂಳು ತಿನ್ನುತ್ತಿದ್ದವು. ಹದಿನೇಳು ಜನರ ತ್ಯಾಗದಿಂದ ಬಿಜೆಪಿ ಸರಕಾರ ಬಂದಿದೆ. ಸರಕಾರ ಬಂದಿರೋದಕ್ಕೆ ಅವರು ಇಷ್ಟೆಲ್ಲ ಮಾತಾಡ್ತಿದ್ದಾರೆ. ಅದು ಸರಿಯಲ್ಲ. ಟೀಕೆ, ಟಿಪ್ಪಣಿ ಯಾವಾಗಲೋ ಒಂದು ಬಾರಿಯಾದರೆ ಒಳ್ಳೆಯದು.

ಯಡಿಯೂರಪ್ಪನವರ ಹೋರಾಟದಿಂದ ಬಿಜೆಪಿ ಸರಕಾರ ಬಂದಿದೆ. ಸರಕಾರ ರಚನೆ ವೇಳೆ ಯಡಿಯೂರಪ್ಪ ಬಿಟ್ಟರೆ ಇವರಾರು ಬಂದಿರಲಿಲ್ಲ.ಯಡಿಯೂರಪ್ಪ ಅವರನ್ನ ನಂಬಿಕೊಂಡು ಹದಿನೇಳು ಜನರು ಬಂದಿದ್ದೇವೆ. ಅದಕ್ಕೆ ಬಿಜೆಪಿ ಸರಕಾರ ಸುಭದ್ರವಾಗಿದೆ. ಅದನ್ನು ಯತ್ನಾಳರು ಅರಿತುಕೊಳ್ಳಲಿ. ಸುಮ್ಮನೆ ನಾಲಿಗೆ ಇದೆ ಅಂತಾ ಏನೇನೋ‌ ಮಾತನಾಡಿದರೆ ಸರಿಯಲ್ಲ. ಯತ್ನಾಳ ಅವರನ್ನ ಕರೆದುಕೊಂಡು ಬಂದಿದ್ದು ಕೂಡ ಯಡಿಯೂರಪ್ಪನವರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಕಿಡಿ ಕಾರಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!