July 25, 2021

ಮನೆ ಬಾಗಿಲು ಮುರಿದು ೬ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು..!

ಶಿಗ್ಗಾಂವ: ಮನೆ ಬಾಗಿಲಿನ ಬೀಗ ಮುರಿದ ದುಷ್ಕರ್ಮಿಗಳು 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಶಿಗ್ಗಾಂವ ಶಹರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಪಟ್ಟಣದ ವಡ್ಡರ ಓಣಿಯ ನಿವಾಸಿ ಸರಕಾರಿ ನೌಕರಸ್ಥ ಶಾಂತರಾಜ ಸಾವಕ್ಕನವರ  ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬಸ್ಥರು ಹೊರಗಡೆ ಹೋಗಿದ್ದಾರೆ. ಇದೇ ಸಮಯಕ್ಕೆ ಬಂದ ಕಳ್ಳರು ಅಕ್ಕ ಪಕ್ಕದ ಮನೆಯವರಿಗೂ ತಿಳಿಯದಂತೆ ಮನೆಗೆ ಹಾಕಿದ ಬೀಗವನ್ನು ಒಡೆದು ಮನೆಯೊಳಗೆ ನುಗ್ಗಿ ತಿಜೂರಿಯಲ್ಲಿದ್ದ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಗೆ ಮರಳಿ ಬಂದ ಶಾಂತರಾಜ ಕುಟುಂಬ ಮನೆಯ ಬಾಗಿಲು ತೆರೆದಿರುವದನ್ನು ನೋಡಿ ಗಾಬರಿಗೊಂಡು ಶಿಗ್ಗಾಂವ ಪೂಲೀಸ ಠಾಣೆಗೆ ಪೋನಾಯಿಸಿ ಮನೆಯಲ್ಲಿ ಕಳ್ಳತನವಾದ ಬಗ್ಗೆ ತಿಳಿಸಿದ್ದಾರೆ. ಆಗ ಪೂಲೀಸ್ ಸಿಬ್ಬಂದಿ ವಿಷಯ ತಿಳಿದು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿನೆ ನಡೆಸಿದರು. ಮನೆಯಲ್ಲಿ ಕಳವು ಆಗಿರುವ ಬಗ್ಗೆ ಶನಿವಾರ ಶಿಗ್ಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

Share this News
error: Content is protected !!