July 25, 2021

ಗ್ರಾಮ ಪಂಚಾಯತ ಜನಪ್ರತಿನಿಧಿಗಳು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಬೇಕು. -ಪಿ.ಮುನಿಯಪ್ಪ

ಹಾವೇರಿ : ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾನೂನು ಬದ್ದವಾಗಿ ಸಹಕಾರ ನೀಡಲಾಗುವುದು.ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಲು ಗ್ರಾಪಂ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ ಎಂದು ಸವಣೂರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ ಮುನಿಯಪ್ಪ ಹೇಳಿದರು.

ಜಿಲ್ಲೆಯ ಸವಣೂರ ಪಟ್ಟಣದ ತಾಲ್ಲೂಕ ಪಂಚಾಯತಿ ಆವರಣದಲ್ಲಿನ ಸಾಮರ್ಥ್ಯ ಸೌಧದಲ್ಲಿ ಜರುಗಿದ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಸಿ ಅವರು ಮಾತನಾಡಿದರು. ಗ್ರಾಮಗಳು ಕೃಷಿ ಪ್ರಧಾನಗಳಾಗಿದ್ದು, ಕೃಷಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಹೆಚ್ಚು ಮಾಡಲು ಅವಕಾಶವಿದೆ.ದೇಶದ ಅಭಿವೃದ್ಧಿ ಗ್ರಾಮಗಳ ಪ್ರಗತಿಯ ಮೇಲೆ ಅವಲಂಬಿಸಿದೆ‌.

ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗ್ರಾಪಂ ಪ್ರತಿನಿಧಿಗಳು ಸದಾ ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರಯತ್ನಿಸಬೇಕು.ಉತ್ತಮ ಕೆಲಸ ಮಾಡಲು ಗ್ರಾಪಂಗಳಲ್ಲಿ ಅವಕಾಶವಿದೆ.ಕುಡಿಯುವ ನೀರು.ಶಿಕ್ಷಣ ಹಾಗೂ ಗ್ರಾಮ ನೈರ್ಮಲ್ಯಕ್ಕೆ ಮಹತ್ವ ನೀಡುವುದು ಅಗತ್ಯವಾಗಿದೆ.ಜನರ ಸಹಕಾರ ಪಡೆದು ಅವರ ಬೇಡಿಕೆಗಳ ಈಡೇರಿಕೆಗೆ ಸದಾ ಶ್ರಮವಹಿಸಿ ಎಂದು ಗ್ರಾಪಂ ಜನಪ್ರತಿನಿಧಿಗಳಿಗೆ ಕಿವಿಮಾತನ್ನು ಇಓ ಪಿ ಮುನಿಯಪ್ಪ ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಮಿಷನಿನ ಬಿ.ವೈ.ದಳವಾಯಿ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ ಹಿರೇಮಠ. ಬಸವಣ್ಣಯ್ಯ ಪೂಜಾರ, ಗ್ರಾ.ಪಂ. ಅಧ್ಯಕ್ಷಗಳಾದ ಮಂಜುನಾಥ ಕಲ್ಲನಗೌಡ್ರ. ಶ್ರೀಮತಿ ಕಮಲಾ ಹೊಸಮನಿ. ಶ್ರೀಮತಿ ಚಂದ್ರಕಲಾ ಕಮ್ಮಾರ. ಪಿಡಿಓ ನಾಗರಾಜ ಬುಶೆಟ್ಟಿ. ಕಾರ್ಯದರ್ಶಿಗಳಾದ ಹನಮಂತಪ್ಪ ಸಂಗೂರ. ಜನಪ್ರತಿನಿಧಿಗಳಾದ ಮರಿಯಪ್ಪ ನಡುವಿನಮನಿ. ನಿಂಗಪ್ಪ ಎಂ ಆರೇರ. ಬಸವಂತರಾಯ ಹಾಲಗಿ. ಶಿವಾನಂದ ಬಾರ್ಕಿ ಸೇರಿದಂತೆ ಹಿರೇಮುಗದೂರ, ಕಳಸೂರ ಹಾಗೂ ಕುಣಿಮೆಳ್ಳಿಹಳ್ಳಿ ಗ್ರಾಪಂಗಳ ಜನಪ್ರತಿನಿಧಿಗಳು ಹಾಗೂ ತಾಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Share this News
error: Content is protected !!