ಹಾವೇರಿ: ಮನುಷ್ಯ ಸಾವನ್ನಪ್ಪಿದರೇ ಅವರ ನೆನಹು ಮಾಡಿಕೊಳ್ಳುವ ಸಲುವಾಗಿ 5 ದಿನಕ್ಕಾಗಲಿ 9 ದಿನಕ್ಕಾಗಲಿ ಪುಣ್ಯ ಸ್ಮರಣೆ ಮಾಡುವುದು ಸಂಪ್ರದಾಯ. ಆದರೆ ಇಲ್ಲಿಯೊಬ್ಬ ರೈತ ತಾನು 15 ವರ್ಷಗಳಿಂದ ಅತ್ಯಂತ ಪ್ರೀತಿಯಿಂದ ಸಾಕಿದ ವೃಷಭ( ಹೋರಿ) ಸಾವನ್ನಪಿದ ನಂತರ ಮನುಷ್ಯರಿಗೆ ನೇರವೇರಿಸುವ ಹಾಗೇ ಪುಣ್ಯತಿಥಿ ನೆರವೇರಿಸಿರುವ ಅಪರೂಪದ ಘಟನೆ ತಾಲೂಕಿನ ದೇವಗಿರಿ ಯಲ್ಲಾಪುರದಲ್ಲಿ ನಡೆದಿದೆ.
ಗ್ರಾಮದ ರೈತ ಶಿವನಗೌಡ ಕರೇಗೌಡ್ರ ಇವರು ಕಳೆದ ಹದಿನೈದು ವರ್ಷಗಳಿಂದ ಹೋರಿಯೊಂದನ್ನು ಸಾಕಿ ಅದಕ್ಕೆ ಕಲ್ಮೇಶ್ವರ ಎಂದು ನಾಮಕರಣ ಮಾಡಿ ಮನೆಯ ಮಗನಂತೆ ಸಾಕಿ ಬೆಳಿಸಿದ್ದರು. ಇದು ಶಿವಮೊಗ್ಗ ಡಾವಣಗೆರೆ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು.ಅಪಾರ ಅಭಿಮಾನಿ ಬಳಗವನ್ನು ಹೊಂದಿದ ಕಲ್ಮೇಶ್ವರ ಕಳೆದ ವರ್ಷ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿತ್ತು. ಅದನ್ನು ಗ್ರಾಮದ ಕಲ್ಮೇಶ್ವರ ದೇವಾಲಯದ ಬಳಿ ಸಮಾಧಿ ಮಾಡಲಾಗಿದೆ.
ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ CLICK ಮಾಡಿ
ಇಂದಿಗೆ ಮೃತ ಪಟ್ಟು ಒಂದು ವರ್ಷವಾದ ಕಾರಣ ಶಿವನಗೌಡ ಮೃತಪಟ್ಟವರಿಗೆ ಪ್ರಥಮ ವರ್ಷದ ಪುಣ್ಯಸ್ಮರಣೆ ಆಚರಿಸುವಂತೆ ವೃಷಭನಿಗೆ ಆಚರಣೆ ಮಾಡಿ ಮಾನವಿಯತೆಯ ಜೊತೆಗೆ ಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಬಂಧ ತಾಯಿ ಮಕ್ಕಳ ಸಂಬಂಧ ಎಂಬುದನ್ನು ಜಗತ್ತಿಗೆ ತಿಳಿಸುವುದರ ಮೂಲಕ ಗ್ರಾಮಸ್ಥರ ಪಾತ್ರರಾಗಿದ್ದಾರೆ.
More Stories
35 ವರ್ಷಗಳ ನಂತರ ಮನೆಯಲ್ಲಿ ಹೆಣ್ಣುಮಗುವಿನ ಜನನ: ಹೆಲಿಕ್ಯಾಪ್ಟರ್ ನಲ್ಲಿ ಮೊಮ್ಮಗಳನ್ನು ಕರೆತಂದ ಅಜ್ಜ..!
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!