July 25, 2021

“ಕೆಜೆಪಿಯಲ್ಲೇಕೆ ವಿಜಯೇಂದ್ರ ಮಾಯಮಂತ್ರ ಮಾಡಿಲ್ಲ? ಜಾತಿ ಬಿಟ್ಟರೆ ಅವನ ಬಳಿ ಬೇರೆ ಏನಿದೆ?”

ರಾಯಚೂರು- ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರರವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದು, “ಯಡಿಯೂರಪ್ಪ ಕೆಜೆಪಿ ಶುರುಮಾಡಿದಾಗ ಈ ವಿಜಯೇಂದ್ರ ಎಲ್ಲಿದ್ದ? ಆಗೇಕೆ ಅವನು ಮಾಯಮಂತ್ರ ಮಾಡಿಲ್ಲ? ವಿಜಯೇಂದ್ರ ಬಳಿ ಜಾತಿ ಬಿಟ್ಟರೆ ಬೇರೇನಿದೆ?” ಎಂದು ವ್ಯಂಗ್ಯವಾಡಿದ್ದಾರೆ.

ಮಸ್ಕಿ ಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಕಳೆದ ಚುನಾವಣೆಯಲ್ಲೂ ನಿಲ್ತೀನಿ ಅಂತ ಹೇಳಿದ್ದ ವಿಜಯೇಂದ್ರ ನಿಂತಿರಲಿಲ್ಲ. ಈಗಲೂ ನಿಂತಿಲ್ಲ. ವರುಣಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದು ನಾವು. ಆದ್ದರಿಂದ ಅಲ್ಲಿನ ಜನರು ನನ್ನ ಮಗನ್ನು 59 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಜನರ ಆಶೀರ್ವಾದ ನಮ್ಮ ಮೇಲಿದೆ. ವಿಜಯೇಂದ್ರ ಜಾತಿ ಹೆಸರೇಳಿಕೊಂಡು ಬಂದರೆ ಜನರು ಮತ ಕೊಟ್ಟುಬಿಡ್ತಾರಾ?” ಎಂದು ಪ್ರಶ್ನಿಸಿದ್ದಾರೆ.

“ಈಗ ಪಕ್ಷ ಬದಲಾಯಿಸಿದವರ ತರ ನಾನು ಹಣ ಪಡೆದು ಜೆಡಿಎಸ್‌ ಬಿಟ್ಟಿದ್ದಲ್ಲ. ನಾನು ಕಾಂಗ್ರೆಸ್‌ ಸೇರಲು ಜೆಡಿಎಸ್‌ ತೊರೆದಿದ್ದಲ್ಲ. ಮಿಸ್ಟರ್‌ ದೇವೇಗೌಡ ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದರು. ನಂತರ ನಾನು ಅಹಿಂದ ಸಂಘಟನೆ ಮಾಡುತ್ತಿದ್ದೆ. ಆಮೇಲೆ ಕಾಂಗ್ರೆಸ್‌ನವರು ನನಗೆ ಆಹ್ವಾನ ನೀಡಿದರು. ಬೆಂಗಳೂರಿನಲ್ಲಿ ಐದು ಲಕ್ಷ ಜನರ ಬಹಿರಂಗ ಸಮಾವೇಶದಲ್ಲಿ ಸೋನಿಯಾ ಗಾಂಧಿಯವರು ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರು” ಎಂದು ಹೇಳಿದರು.

Share this News
error: Content is protected !!