July 25, 2021

2ನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ: ಖಾಸಗಿ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ.ಕೊಪ್ಪಳಕ್ಕೆ ಸಂದರ್ಶನಕ್ಕೆ ತೆರಳಲು ಬಸ್ ಇಲ್ಲದೆ ವ್ಯಕ್ತಿ ಪರದಾಟ..!

ಹಾವೇರಿ – ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗದ ಜಾರಿಗೆ ಮಾಡುವಂತೆ ಆಗ್ರಹಿಸಿ ನಡೆಸುವ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ. ಹಾವೇರಿ ಜಿಲ್ಲೆಯ ಸಾರಿಗೆ ನೌಕರರು ಮುಷ್ಕರಕ್ಕೆ ಎರಡನೇ ದಿನವೂ ಬೆಂಬಲ‌ ನೀಡಿದ್ದಾರೆ.ಅದರೆ ಓರ್ವ ವ್ಯಕ್ತಿ ಸಂದರ್ಶನಕ್ಕೆ ತೆರಳಲು ಬಸ್ ಇಲ್ಲದೆ ಪರದಾಟ ನಡೆಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಬಸ್ ನಿಲ್ದಾಣದಲ್ಲಿ ಹಾನಗಲ್ ಮೂಲದ ಮಾರುತಿ ನಾಯಕ ಕುಳಿತಿದ್ದ. ಮಾರುತಿ ಇವತ್ತು ಕೊಪ್ಪಳದ ಖಾಸಗಿ ಕಂಪನಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದ್ದು, ಬಸ್ ಇಲ್ಲದೆ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡ್ತಿರೋದ್ರಿಂದ ಬಸ್ ನಿಲ್ದಾಣದಲ್ಲೇ ಕುಳಿತು, ಮತ್ತೆ ಮರಳಿ ಹಾನಗಲ್ ಕಡೆ ಪ್ರಯಾಣ ಬೆಳೆಸಿದರು.

ಖಾಸಗಿ ವಾಹನ ಮಾಲೀಕರು ಹುಬ್ಬಳ್ಳಿ, ಗದಗ, ಕೊಪ್ಪಳಕ್ಕೆ ತೆರಳಲು ದುಪ್ಪಟ್ಟು ಹಣ ವಸೂಲಿ ಮಾಡ್ತಿರೋದ್ರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

_______

Share this News
error: Content is protected !!