April 22, 2021

ಮರಳಿ‌ ಬಾರದೂರಿಗೆ ನಿನ್ನ ಪಯಣ: ಮುಷ್ಕರದ ದಿನ ಕೆಲಸ ಮಾಡಿದ್ದಕ್ಕೆ ಶೋಕ್ ಗೀತೆ ಹಾಕಿ ವಿಡಿಯೋ ವೈರಲ್..!

ಹಾವೇರಿ – ಸಾರಿಗೆ ನೌಕರರ ಮುಷ್ಕರ ಮೂರನೆ ದಿನಕ್ಕೆ ಕಾಲಿಟ್ಟಿದೆ. ಅದರೆ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಸ್ ಓಡಿಸಿದ್ದಕ್ಕೆ ಹಾರ ಹಾಕಿರೋ ಚಾಲಕನ ಪೋಟೋಗೆ ಹಾಡು ಹಾಕಿ ಬೇಸರ ವ್ಯಕ್ತಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ನಗರದಿಂದ ಬಸಾಪುರ ಹಾಗೂ ಗುತ್ತಲಕ್ಕೆ ಚಾಲಕ ರಾಮಣ್ಣ ಕುಂಕುಮಗಾರ ಬಸ್ ಓಡಿಸಿದ್ದಾನೆ. ನಿನ್ನೆ ಸಂಜೆ ಡಿಪೋ ಬಳಿ ಬಂದಿದ್ದ ರಾಮಣ್ಣನನ್ನು ಕರೆದು ಹಿರಿಯ ಅಧಿಕಾರಿಗಳು ಡ್ಯೂಟಿಗೆ ಕಳುಸಿದ್ದರು. ಮುಷ್ಕರ ಬಿಟ್ಟು ಡ್ಯೂಟಿಗೆ ಹೋಗಿದ್ದಕ್ಕೆ ಮರಳಿ ಬಾರದ ಊರಿಗೆ ಎಂಬ ಹಾಡು ಹಾಕಿ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಮುಷ್ಕರ ನಿರತ ಸಾರಿಗೆ ನೌಕರರು ಡ್ಯೂಟಿಗೆ ಹೋಗಿದ್ದ ಚಾಲಕನ ಪೋಟೋಗೆ ಶೋಕ ಗೀತೆ ಹಾಕಿ ವಿಡಿಯೋ ವೈರಲ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಹೇಳಿದ್ದಾರೆ.

 

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!