July 25, 2021

ಅಂಗಡಿಯಲ್ಲಿ ಟೀ ಮಾಡುವಾಗ‌ ಸಿಲಿಂಡರ್ ಸ್ಪೋಟ: ಮಗು ಸೇರಿದಂತೆ ಇಬ್ಬರು ಸಜೀವ ದಹನ..!

ವಿಜಯನಗರ- ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಬ್ಬರ ಸಜೀವ ದಹನಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಲ್ಲಿ ಘಟನೆ ಗ್ರಾಮದಲ್ಲಿ ನಡೆದಿದೆ.

ತಾಯಕನಹಳ್ಳಿ ಗ್ರಾಮದಲ್ಲಿ ಸಿಲೆಂಡರ್ ಸ್ಪೋಟವಾಗಿದ್ದು, ಸಜೀವದಹನಗೊಂಡರನ್ನ ಕೃಷ್ಣಪ್ಪ 28 ವರ್ಷ ವಯಸ್ಸು ಮತ್ತು ಹಾಗೂ ಅತನ ಅಕ್ಕನ ಮಗಳು ಭೂಮಿಕಾ 11 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ.

ಕೃಷ್ಣಪ್ಪ ಶೆಡ್ಡವೊಂದರಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ಇಂದು ಸಂಜೆ ಗ್ಯಾಸ್ ಸ್ಟೌವ್ ಹಚ್ಚಿ ಟೀ ಮಾಡಲು ಇಟ್ಟಿದ್ದಾಗ ಆಕಸ್ಮಿಕವಾಗಿ ಸಿಲೆಂಡರ್ ಸ್ಪೋಟ ವಾಗಿದ್ದು, ಸೆಡ್ಡಿನಲ್ಲಿ ಏಕಾಏಕಿ ಬೆಂಕಿ ತುಂಬಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this News
error: Content is protected !!