July 25, 2021

ಸಿಎಮ್ ಪುತ್ರ ವಿಜಯೇಂದ್ರ ಕರ್ನಾಟಕದ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ.‌ ಇಷ್ಟರಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತೆ. ಮೇ2 ರ ಒಳಗೆ ಸಿಎಮ್ ಬದಲಾವಣೆ ನಿಶ್ಚಿತ. – ಬಸನಗೌಡ ಪಾಟೀಲ ಯತ್ನಾಳ

ಹಾವೇರಿ- ಸಿಎಂ ಯಡಿಯೂರಪ್ಪ ಪುತ್ರ ವ್ಯಾಮೋಹದಿಂದ ತುಂಬಿ ತುಳುಕ್ತಿದ್ದಾರೆ. ಹೀಗಾಗಿ ಮಗನನ್ನು ಉಪಚುನಾವಣೆಗೆ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ರೊಕ್ಕ ಇದೆ. ರೊಕ್ಕ ಹಂಚಲು ಅಲ್ಲಿ ಬಿಟ್ಟಿದ್ದಾರೆ.‌ ವಿಜಯೇಂದ್ರ ಬಳಿ ನಾಯಕತ್ವ ಗುಣವಿಲ್ಲ ಎಂದು ಸ್ವಪಕ್ಷದ ವಿರುದ್ಧ ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು ವಿಜಯೇಂದ್ರ ಬಳಿ ಸಾವಿರಾರು ಕೋಟಿ ಇದೆ. ಕರ್ನಾಟಕದ್ದು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ‌. ಈಗ ಫೆಡರಲ್ ಬ್ಯಾಂಕ್ ದು ಹಗರಣ ಹೊರಗೆ ಬರುತ್ತೆ ನೋಡ್ತೀರಿ. ವಿದೇಶದಲ್ಲಿ ವಿಜಯೇಂದ್ರ ಸಾವಿರಾರು ಕೋಟಿ ಒಯ್ದು ಇಟ್ಟಿದ್ದಾರೆ‌ ಎಂದರು.

ಯಡಿಯೂರಪ್ಪ ಬಿಜೆಪಿ ಕಟ್ಟಿದ್ದಾಗ ಹಣ ಹಂಚುವ ಪರಿಸ್ಥಿತಿ ಇರಲಿಲ್ಲ. ನಾವೆಲ್ಲ ಅತಿ ಕಡಿಮೆ ಹಣದಲ್ಲಿ ಎಂಎಲ್ಎ, ಎಂಪಿ ಆಗಿದ್ದೇವೆ. ಈಗ ಯಡಿಯೂರಪ್ಪ ಕಾಲದಲ್ಲಿ ಹಣ ಹಂಚುವ ಪರಿಸ್ಥಿತಿ ಬಂದಿದೆ. ಇವತ್ತು ಎಂಪಿ ಆಗಬೇಕಾದರೆ ನೂರಾರು ಕೋಟಿ ರುಪಾಯಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ಮೇ 2ರ ಒಳಗೆ ಸಿಎಂ ಬದಲಾವಣೆ ಆಗುತ್ತೆ. ಮತ್ಯಾಕೆ ಮೇ ಎರಡರವರೆಗೆ ಹೋಗ್ತೀರಿ. ಯತ್ನಾಳ ಸಿಎಂ ಆಗ್ತಾರೋ ಅಥವಾ ಬೇರೆ ಇನ್ಯಾರೊ ಯಾರಾಗ್ತಾರೋ ಗೊತ್ತಿಲ್ಲ. ಅದರೆ ಬದಲಾವಣೆಯಂತೂ ಖಚಿತ. ಮೇ ಎರಡರ ಮೇಲಂತೂ ಹೋಗೋದಿಲ್ಲ ಎಂದು ಬಸನಗೌಡ ಯತ್ನಾಳ ಹೇಳಿದ್ದಾರೆ.

______

Share this News
error: Content is protected !!