May 19, 2021

ನ್ಯಾಷನಲ್ ಹೈವೇ ಯಲ್ಲಿ ಬೀಕರ ರಸ್ತೆ ಅಪಘಾತ: ಕಾರಿನಲ್ಲಿ ‌ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದ ಹಾವೇರಿ ಪತ್ರಕರ್ತರು..!

ಹಾವೇರಿ: ಪ್ರತಿದಿನದಂತೆ ತಮ್ಮ ಕರ್ತವ್ಯಕ್ಕೆ ಶಿಗ್ಗಾಂವಿಯತ್ತ ಹೋಗುತ್ತಿದ್ದ ವರದಿಗಾರರ ಮುಂದೆ ನಡೆದ ಭೀಕರ ಅಫಘಾತದಲ್ಲಿ ವಾಹನದಲ್ಲಿಯೇ ಸಿಲುಕಿಕೊಂಡಿದ್ದ ಹಲವರನ್ನು ರಕ್ಷಣೆ ಮಾಡಿ, ತಾವು ತೆರಳುತ್ತಿದ್ದ ವಾಹನದಲ್ಲಿಯೇ ಆಸ್ಪತ್ರೆಗೆ ರವಾನೆ ಮಾಡಿ ಪತ್ರಕರ್ತರು, ತಮ್ಮ ಪತ್ರಿಕಾ ಧರ್ಮಕ್ಕೆ ನ್ಯಾಯ ಒದಗಿಸಿದ ಘಟನೆ ನಡೆದಿದೆ.

ಗುಜರಾತ್ ಮೂಲಕ ಕಾರು ಅಪಘಾತದಲ್ಲಿ ನಜ್ಜು ಗುಜ್ಜಾಗಿ ಅದರಲ್ಲಿಯೇ ಮಹಿಳೆಯೋರ್ವಳು ಸಿಲುಕಿಕೊಂಡು ನರಳುತ್ತಿದ್ದಳು. ಅದನ್ನು ನೋಡಿದ ತಕ್ಷಣವೇ ಕಾರಿನ ಡೋರ್ ಮುರಿದು ಮಹಿಳೆಯನ್ನು ಹೊರಗೆ ತೆಗೆದು ಆಸ್ಪತ್ರೆಗೆ ರವಾನೆ ಮಾಡಿದರು. ಈ ಮೂಲಕ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ.

ತೀವ್ರವಾದ ರಕ್ತಸ್ರಾವವಾಗುತ್ತಿದ್ದ ಮಹಿಳೆಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಯಿತು. ಘಟನಾ ಸ್ಥಳದಲ್ಲಿ ಜಿಲ್ಲಾ ವರದಿಗಾರರಾದ ಪಕ್ಕಿರಯ್ಯ ಗಣಾಚಾರಿ, ರವಿ ಹೂಗಾರ, ಮಾರುತಿ ಮರಾಠಿ, ವೀರೇಶ ಬಾರ್ಕಿ,ರಾಜು ಎಂ ಜಿ, ರಮೇಶ ಬಿ.ಹೆಚ್,ನಾಗರಾಜ ಮೈದುರು, ಮಂಜು ತಳವಾರ, ಶಿವು ಮಡಿವಾಳರ, ಚಾಲಕ ಹನುಮಂತಪ್ಪ ಉಪಸ್ಥಿತರಿದ್ದು, ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ರಕರ್ತನ ಬದುಕೇ ಹೀಗೆ. ಬೇರೆಯವರನ್ನು ಉಳಿಸಿ, ಸಂತಸ ಪಡುವುದರಲ್ಲಿ ಇರುವ ಸುಖವನ್ನು ಅನುಭವಿಸಿದವರಿಗೆ ಗೊತ್ತು…

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!