July 25, 2021

ರಸ್ತೆ ಪಕ್ಕದಲ್ಲಿ ನಿಂತಿದ್ದವರ ಮೇಲೆ ಹರಿದ ಕಾರು: ಪತಿ ಸ್ಥಳದಲ್ಲೆ ಸಾವು, ಪತ್ನಿ ಮತ್ತು ಮಗುವಿಗೆ ಗಾಯ. ಬ್ಯಾಡಗಿ ತಾ| ಕದಮನಹಳ್ಳಿ ಕ್ರಾಸನಲ್ಲಿ ಘಟನೆ..!

ಹಾವೇರಿ- ರಸ್ತೆ ಪಕ್ಕದಲ್ಲಿ ನಿಂತಿದ್ದವರ ಮೇಲೆ ಕಾರು ಹರಿದು ಪತಿ ಸ್ಥಳದಲ್ಲೇ ಸಾವನ್ನಪ್ಪಿದು, ಪತ್ನಿ ಮತ್ತು ಮಗುವಿಗೆ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಕ್ರಾಸ್ ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಯಲ್ಲಪ್ಪ ಲಮಾಣಿ 25 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಮೃತ ಯಲ್ಲಪ್ಪನ ಪತ್ನಿ ರೂಪಾ 20 ವರ್ಷ ಮತ್ತು ಮಗ ಒಂಬತ್ತು ತಿಂಗಳ ಶರತ್ ಗೆ ಗಾಯವಾಗಿದೆ.‌ ಕೂಡಲೇ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುಂಡೇನಹಳ್ಳಿ ತಾಂಡಾದಿಂದ ಚಿಕ್ಕಮಳ್ಳಳ್ಳಿಗೆ ತೆರಳಲು ವಾಹನಕ್ಕಾಗಿ ಕಾಯುತ್ತಾ ನಿಂತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Share this News
error: Content is protected !!