July 25, 2021

ಗುಡ್ಡಾಪುರ ದಾನಮ್ಮದೇವಿ ವಿವಾಹ ಮಹೋತ್ಸವ: ಹೋಳಿಗೆ ಸಿಕರಣೆ ಪ್ರಸಾದ ವಿತರಣೆ..!

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜರಗುತ್ತಿರುವ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಗುಡ್ಡಾಪುರ ದಾನಮ್ಮದೇವಿ ವಿವಾಹ ಮಹೋತ್ಸವ ನಿಮಿತ್ಯವಾಗಿ ಭಕ್ತಾಧಿಗಳಿಗೆ ಹೋಳಿಗೆ ಶಿಕರಣೆ ಪ್ರಸಾದ ವಿತರಿಸಲಾಯಿತು.

ಈ ಪ್ರಸಾದ ಸೇವೆಯನ್ನು ಸಹದೇವಗೌಡ ಹರಂಕಗಿ ಕುಟುಂಬಸ್ಥರು ನೇರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋಳಿಗೆ ಪ್ರಸಾದ ಸವಿದರು. ಈ ಪ್ರಸಾದ ತಯಾರಿಕೆಯಲ್ಲಿ ಗ್ರಾಮದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿಗಳಾಗಿದ್ದರು.

Share this News
error: Content is protected !!