July 25, 2021

ಯುಗಾದಿ ದಿನದಂದು ಬಾನಂಗಳಲ್ಲಿ ಮೂಡಿದ ಅಧ್ಭುತ್ ಚಿತ್ತಾರ: ನೋಡಿ ಖುಷಿಪಟ್ಟ ಜನರು..! ಇದು ನಡೆದಿದ್ದು ಎಲ್ಲಿ ಗೊತ್ತಾ..?

ಬೆಂಗಳೂರು- ಇವತ್ತು ಯುಗಾದಿ ಹಬ್ಬ. ಅದರಲ್ಲೂ ಭಾರತೀಯ ಪಂಚಾಂಗದ ಪ್ರಕಾರ ಹೊಸವರ್ಷ, ಹೊಸ ದಿನ ಪ್ರಾರಂಭವಾಗಿದೆ. ಅದರೆ ಯುಗಾದಿ ಹಬ್ಬ ದಿನವೇ ಚಕ್ರ ಅಕಾರದ ಸೂರ್ಯನ ದರ್ಶನ ಹಾಗೂ ಸೂರ್ಯನ ಸುತ್ತ ಚಕ್ರದ ಅಕಾರದ ಅಪರೂಪದ ವಿಸ್ಮಯಕಾರಿ ಘಟನೆ ಕಂಡುಬಂದಿದ್ದು ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ ಜಿಲ್ಲೆಯ ಯಲಹಂಕ ತಾಲೂಕ ಸುರದೇನಪುರದ ಬಳಿ ಈ ವಿಸ್ಮಯ ‌ನಡೆದಿದೆ.

ಯುಗಾದಿಯಂದು ಸೂರ್ಯನ ವಿಶೇಷ ಅಕಾರ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬರಿಗಣ್ಣಿನಿಂದ ಸೂರ್ಯನ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಸೂರ್ಯನ ಸುತ್ತಲು ಚಕ್ರ ರಚನೆಯಾಗಿದ್ದು, ಸೂರ್ಯನನ್ನು ಬಂದಿಸಿತ್ತು. ಈ ರೀತಿಯ ವಿಸ್ಮಯಕಾರಿ ಘಟನೆಯನ್ನು ಜನರು ನೋಡಿ ಖುಷಿಪಟ್ಟಿದ್ದು, ಸೂರ್ಯನ ಸುತ್ತ ವೃತ್ತಕಾರದ ಚಕ್ರ ಪ್ರಕಾಶಿಸಿದ್ದು ಯುಗಾದಿ ಹಬ್ಬಯಂದು ವಿಶೇಷವಾಗಿತ್ತು. ಒಟ್ಟಿನಲ್ಲಿ ಖಗೋಳದಲ್ಲಿ ಇಂತಹ ಹಲವಾರು ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತವೆ. ಇವತ್ತು ಜನರು ಈ ದೃಶ್ಯ ನೋಡಿ ಕೈಮುಗಿದು ಹಬ್ಬವನ್ನು ಆಚರಣೆ ಮಾಡಿದರು

Share this News
error: Content is protected !!