May 19, 2021

ಗಂಡು ದಿಕ್ಕಿಲ್ಲದ ಮನೆಯಂತಾದ ಹಾವೇರಿ, ಇಲ್ಲಿ ‌ಹೇಳೊರು ಇಲ್ಲಾ ಕೇಳೊರು ಇಲ್ಲಾ: ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಗಮನಹರಿಸದ ನಗರಸಭೆ..!?

ಹಾವೇರಿ – ಬೇಸಿಗೆ ಆರಂಭವಾಗಿದೆ. ಹಾವೇರಿ ನಗರದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಅದ್ರೆ ಹಾವೇರಿ ನಗರದ ಹೃದಯ ಭಾಗವಾದ ಜೆಎಚ್. ಪಟೇಲ್ ವೃತ್ತಿದಲ್ಲಿ ಪೈಪ್ ಒಡೆದು ನಿರಂತರ ನೀರು ಪೋಲಾಗುತ್ತಿದೆ.

ಕಳೆದ ೨೦ ದಿನಗಳ ಹಿಂದೆ ಜೆಎಚ್ ಪಟೇಲ್ (ಗಡಿಯಾರ) ಸರ್ಕಲ್ ನಲ್ಲಿ ಪೈಪ್ ಲೈನ್ ಒಡೆದು ಹೋಗಿದೆ.‌ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಈಗ ಮತ್ತೆ ಪೈಪ್ ಒಡೆದು ನಿರಂತರವಾಗಿ ನೀರು ಸುರಿಕೆಯಾಗುತ್ತಿದೆ.

ಪೈಪ್ ಒಡೆದ ರಸಭಸಕ್ಕೆ ರಸ್ತೆಯಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿದ್ದು, ಬೈಕ್ ಸವಾರರು ಬಿದ್ದು ಸಣ್ಣಪುಟ್ಟ ಅನಾಹುತಕ್ಕೆ ಕಾರಣವಾಗಿದೆ. ಅದರೆ ನಗರಸಭೆಯ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಅದೇ ಮಾರ್ಗವಾಗಿ ಓಡುತ್ತಾರೆ. ಅದರೂ ನೋಡಿದರೂ ನೋಡದ ಹಾಗೆ ಓಡಾಡುತ್ತಿದ್ದಾರೆ.

ನಗರಸಭೆಯ ಸಿಬ್ಬಂದಿ ಹಾಗೂ ನಗರಸಭೆಯ ಸದಸ್ಯರು ಪೈಪ್ ಲೈನ್ ದುರಸ್ತಿ ಕಾರ್ಯ ಮಾಡಿಸಿ ನೀರು ಪೋಲಾಗುವುದನ್ನು ತಡೆಗಟ್ಟು ಮುಂದಾಗಬೇಕಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!