July 25, 2021

ಯಾಲಕ್ಕಿ ನಾಡಿನ ಯುವಕನಿಂದ ದೇಶದ ಒಳಿತಿಗಾಗಿ ಸಂಕಲ್ಪ: ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ವರೆಗೆ ಸೈಕಲ್ ಯಾತ್ರೆ..!

ಹಾವೇರಿ: ಯಾಲಕ್ಕಿ ಕಂಪಿನ ನಾಡು ಹಾವೇರಿಯ ರಾಮಭಕ್ತ ಯುವಕನೊರ್ವ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ರಾಮಜನ್ಮಭೂಮಿ ಅಯೋದ್ಯ ಸೈಕಲ್ ಯಾತ್ರೆಗೆ ಹುಕ್ಕೇರಿಮಠ ಸದಾಶಿವ ಶ್ರೀಗಳು ಚಾಲನೆ ನೀಡಿದರು.

ಹಾವೇರಿ ನಗರದ ಯುವಕ ವಿವೇಕಾನಂದ ಎಸ್ ಇಂಗಳಗಿ, ತಮ್ಮೆಲ್ಲ ಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ.

ಯುವಕ ಮಾಡಿರುವ ಸಂಕಲ್ಪಗಳು ಏನು..?

ವಿವೇಕಾನಂದ ಎಸ್ ಇಂಗಳಗಿ ಕೊರೋನಾ ಮುಕ್ತ ಭಾರತವಾಗಬೇಕು. ವಿಶ್ವ ,ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಅರ್ಭಟ ಹೆಚ್ಚಾಗುತ್ತಿದೆ. ಕೊರೋನಾ ಮುಕ್ತ ಭಾರತವಾಗಬೇಕು.
ಹಾವೇರಿ ಜಿಲ್ಲೆಯ ಅಭಿವೃದ್ಧಿ, ಸಮಸ್ತ ಕರ್ನಾಟಕ ಜನರಿಗೆ ಒಳಿತಿಗಾಗಿ, ಜೀವಜಲ ಉಳಿವಿಗಾಗಿ ಸಂಕಲ್ಪ ಮಾಡಿಕೊಂಡಿದ್ದಾನೆ.

ಸೈಕಲ್ ಯಾತ್ರೆ

ವಿವೇಕಾನಂದ ಇವತ್ತಿನಿಂದ ಸೈಕಲ್ ಯಾತ್ರೆ ಪ್ರಾರಂಭಸಿದ್ದಾನೆ. ಪ್ರತಿನಿತ್ಯ100 ಕಿಲೋಮೀಟರ್ ವರೆಗೆ ಸೈಕಲ್ ಪ್ರವಾಸ ಮಾಡಲಿದ್ದಾನೆ. ಅಲ್ಲಿ ಸಿಗುವ ರಾಮಭಕ್ತರ ಮನೆಯಲ್ಲಿ ವಸತಿ ಮಾಡಿ ನಂತರದಲ್ಲಿ ಮತ್ತೆ ಪ್ರಯಾಣವನ್ನು ಬೆಳೆಸುತ್ತಾ 2000 ಕಿಲೋಮೀಟರ್ ಕ್ರಮಿಸಿ ಅಯೋಧ್ಯ ಶ್ರೀ ರಾಮನ ದಶ೯ನ ಪಡೆದು ಅಲ್ಲಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಾವೇರಿ ಕಡೆಗೆ ಪ್ರಯಾಣ ಬೆಳೆಸಲಿದ್ದಾನೆ.

ಶ್ರೀಗಳು ಸಾಧಕ ರತ್ನ ಲೋಗೋವನ್ನು ಸೈಕಲ್ ಅಳವಡಿಸುವ ಮೂಲಕ ಶ್ರೀ ಸದಾಶಿವ ಮಹಾಸ್ವಾಮಿಗಳು ಚಾಲನೆ ನೀಡಿದರು. ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ್ ಕಲಕೋಟಿ, ಸಾಧಕ ರತ್ನ ಪೇಜಿನ ಗಣೇಶ ರಾಯ್ಕರ, ಕಾರ್ತಿಕ್ ಲಂಬಿ, ಧರ್ಮರಾಜ ಖಜ್ಜೂರಕರ್,ಶ್ರವಣ್ ಪಂಡಿತ್, ಮಲ್ಲಿಕಾರ್ಜುನ್ ಇಂಗಳಗಿ, ಗಣೇಶ ಅಜ್ಜನವರ, ಮನೋಜ ವೈದ್ಯ, ಪ್ರಶಾಂತ ದೊಡ್ಡಮನಿ ಹಾಗೂ ಗಣ್ಯ ಮಾನ್ಯರು ಯುವಕರು ಸೈಕಲ್ ಯಾತ್ರೆಗೆ ಶುಭಹಾರೈಸಿದರು.

_____

Share this News
error: Content is protected !!