July 25, 2021

ಶಸ್ತ್ರಚಿಕಿತ್ಸೆ ನಡೆಸಿದರೂ ಬದುಕುಳಿಯಲಿಲ್ಲ ಹಾವು, ಉರಗ ಪ್ರೇಮಿಗಳ ಸಂತಾಪ..! ಅಷ್ಟಕ್ಕೂ ಆಗಿದ್ದೇನು..?

ಹಿರೇಕೆರೂರು- ಜೆಸಿಬಿ ಕಾಮಗಾರಿ ವೇಳೆ ಗಾಯಗೊಂಡ ಹಾವು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ.

ಇಲ್ಲಿ‌ನ ದಯಾನಂದ ಜನ್ನು ಪೆಟ್ರೋಲ್ ಬಂಕ್ ನಲ್ಲಿ ಜೆಸಿಬಿಯಿಂದ ಕಾಮಗಾರಿ ನೆಡೆಯುತ್ತಿತ್ತು. ಈ ವೇಳೆ ಹಾವಿನ ಸೊಂಟದ ಬೋನ್ ಮುರಿದು, ತೀವ್ರವಾದ ಗಾಯವಾಗಿತ್ತು. ಈ ಹಿನ್ನೆಲೆ ಉರಗ ಪ್ರೇಮಿ ರಮೇಶ್ ಅವರಿಗೆ ಕರೆ ಮಾಡಿದ್ದರಿಂದ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ರಮೇಶ್ ಹಾವನ್ನು ರಕ್ಷಿಸಿ, ಆಸ್ಪತ್ರೆಗೆ ಕರೆತಂದು ಸ್ಟಿಚ್ ಹಾಕಿಸಿದ್ದರು.

ಆದರೆ ಚಿಕಿತ್ಸೆ ನಂತರ ಸ್ವಲ್ಪ ಹೊತ್ತಲ್ಲಿ ಹಾವು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಹೀಗಾಗಿ ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ಮಾಡಿದರೂ, ಹಾವನ್ನು ಬದುಕಿಸಿ ಕೊಳ್ಳಲಾಗಲಿಲ್ಲಾ ಎಂದು ಉರಗ ಪ್ರೇಮಿ ರಮೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದರು.

Share this News
error: Content is protected !!