July 25, 2021

ನೇತ್ರದಾನಕ್ಕೆ ವಾಗ್ದಾನ: 15ನೇಯ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಮಾದರಿಯಾಗಿ ಆಚರಿಸಿಕೊಂಡ ರಟ್ಟಿಹಳ್ಳಿಯ ದಂಪತಿಗಳು..!

ಹಾವೇರಿ : ಮದುವೆ ವಾರ್ಷಿಕೋತ್ಸವ ಅಂದರೆ ದಂಪತಿಗಳಿಗೆ ಸಂಭ್ರಮ ಇರುತ್ತೆ. ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಅಚರಣೆ ಮಾಡುತ್ತಾರೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದ ಮಾಲತೇಶ ಬೆಳಕೇರಿ ಮತ್ತು ಪವಿತ್ರ ಬೆಳಕೇರಿ ದಂಪತಿ ನೇತ್ರದಾನಕ್ಕೆ ವಾಗ್ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ‌.

ನೇತ್ರದಾನ ವಾಗ್ದಾನದ ಮೂಲಕ ತಮ್ಮ ಹದಿನೈದನೆಯ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವ ಮಾಲತೇಶ ಬೆಳಕೇರಿ, ರಟ್ಟೀಹಳ್ಳಿ ಪಟ್ಟಣದಲ್ಲಿ ಖಾನಾವಳಿ ಇಟ್ಟುಕೊಂಡಿದ್ದಾರೆ. ಕುಸ್ತಿ ಪೈಲ್ವಾನ್ ರಾಗಿದ್ದ ಮಾಲತೇಶ, ಹಲವಾರು ಕಡೆಗಳಲ್ಲಿ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಖಾನಾವಳಿ ನಡೆಸುತ್ತಿರುವ ಮಾಲತೇಶ, ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

 

ಮಾಲತೇಶ ಹೊಟೇಲ್ ಇಟ್ಟುಕೊಂಡಿದ್ದರೆ, ಪತ್ನಿ ಪವಿತ್ರ ಮನೆಗೆಲಸ ಮಾಡಿಕೊಂಡಿದ್ದಾರೆ. ಎಲ್ಲರೂ ಕೇಕ್ ಕತ್ತರಿಸಿ ಆಡಂಭರದಿಂದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಣೆಗೆ ದಂಪತಿ ನಿರ್ಧಾರ ಮಾಡಿದ್ದರು.

ಆನ್ಲೈನ್ ನಲ್ಲಿ ಮಾಲತೇಶ ಮತ್ತು ಪವಿತ್ರ ದಂಪತಿ ತಮ್ಮ ಮರಣಾನಂತರ ನೇತ್ರದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಜೀವನ ಸಾರ್ಥಕತೆ ಎಂಬ ವೆಬ್ ಸೈಟ್ ನಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ಮರಣಾನಂತರ ನೇತ್ರದಾನ ಮಾಡುವ ವಾಗ್ದಾನದ ನೋಂದಣಿ ಮಾಡಿಕೊಂಡಿದ್ದಾರೆ. ನೇತ್ರದಾನ ಮಾಡುವ ಪತಿಯ ನಿರ್ಧಾರಕ್ಕೆ ಪತ್ನಿ ಸಹ ಸಾಥ್ ನೀಡಿದ್ದಾರೆ.

___

Share this News
error: Content is protected !!