July 25, 2021

ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.‌ದಾಖಲು..!

ಹಾವೇರಿ- ಕೊರೋನಾ ನಿಯಮ ಉಲ್ಲಂಘಿಸಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಇಂಡಿಯನ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದ 30 ರಿಂದ 35 ರೈತರ ಮೇಲೆ‌ ಪ್ರಕರಣ ದಾಖಲು ಮಾಡಲಾಗಿದೆ.2019ರಲ್ಲಿ ಸಾಲಮನ್ನಾ ಯೋಜನೆಯಡಿ ಹಣ ಬಿಡುಗಡೆಯಾದ್ರೂ ರೈತರ ಖಾತೆಗೆ ಹಣ ಜಮಾ‌ ಆಗಿಲ್ಲವೆಂದು ರೈತರು ಪ್ರತಿಭಟನೆ ಮಾಡಿದ್ದರು.

ಕೊರೋನಾ ಎರಡನೇ ಅಲೆಯ ಅಬ್ಬರವಿದ್ದರೂ ಮಾಸ್ಕ್ ಧರಿಸದೆ, ಸಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರತಿಭಟನೆ ನಡೆಸಿದ್ದಕ್ಕೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಣೆಬೆನ್ನೂರು ನಗರಠಾಣೆ ಪಿಎಸ್ಐ ಪ್ರಭು ಕೆಳಗಿನಮನಿ ಪ್ರಕರಣ ದಾಖಲು ಮಾಡಿದ್ದಾರೆ.

ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಕಟ್ಟಿಕೊಂಡು ನಿನ್ನೆ ಪ್ರತಿಭಟನೆ ಮಾಡಿದ್ದಕ್ಕೆ ದೂರು ದಾಖಲು ಮಾಡಲಾಗಿದೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Share this News
error: Content is protected !!