July 25, 2021

ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!

ಹಾವೇರಿ- ದಿನದಿಂದ ದಿನಕ್ಕೆ ಕೊರೋನಾ ಎರಡನೇ ಅಲೆಯ ಭಯ ಹೆಚ್ಚಾಗುತ್ತಿದೆ. ಇವತ್ತು ಕೊರೋನಾ ಇರೋ ಹಿನ್ನೆಲೆ, 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು ಹಾಕಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ನಗರದ ಜಾನುವಾರು ಮಾರುಕಟ್ಟೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನ, ಶವಾಗಾರಕ್ಕೆ ಮೃತದೇಹ ಸಾಗಿಸಲೂ ಜನರು ಹಾಗೂ ವಾಹನಗಳು ಬರಲು ಹಿಂದೇಟು ಹಾಕಿದರು. ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ನೆರವಿನಿಂದ ಶವಾಗಾರಕ್ಕೆ ಪೊಲೀಸರು ಮೃತದೇಹ ರವಾನೆ ಮಾಡಿದರು. ಪೊಲೀಸರು ಟಂಟಂ ವಾಹನದ ಚಾಲಕನ ಮನವೊಲಿಸಿ ಮೃತದೇಹವನ್ನ ಶವಾಗಾರಕ್ಕೆ ದಾಖಲಿಸಿದರು.

ಬೆಳಿಗ್ಗೆ ಹತ್ತು ಗಂಟೆಯಿಂದಲೆ ಮೃತದೇಹ ಬಿದ್ದಿದ್ದರೂ ಮೃತದೇಹದ ಬಳಿ ಯಾವ ಜನರು ಸುಳಿಯಲಿಲ್ಲ. ಸುಮಾರು ಗಂಟೆಗಳಿಂದ ಸಾಮಾಜಿಕ ಕಾರ್ಯಕರ್ತರು ಹಾಗೂ ಟಂಟಂ ವಾಹನ ಡ್ರೈವರ್ ಮಂಜು ಬ್ಯಾಡಗಿ ಹಾಗೂ ಪೊಲೀಸರು ಸೇರಿ ಶವಗಾರಕ್ಕೆ ಮೃತದೇಹ ಸಾಗಿಸಿದರು.‌ ಸ್ಥಳದಲ್ಲೇ ಇದ್ದ ಕೆಲವು ಜನರನ್ನ ಕರೆದರೂ ಯಾರೊಬ್ಬರು ಮೃತದೇಹ ಎತ್ತಲು ಬರಲಿಲ್ಲ.

Share this News
error: Content is protected !!