July 25, 2021

ಕೋವಿಡ್ ಮೆಡಿಕಲ್ ಎಮರ್ಜೆನ್ಸಿಗೆ ಸಿದ್ದರಾಗಿ: ಸಚಿವ ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ಸವಣೂರಿನ ಅಧಿಕಾರಿಗಳಿಗೆ ಕಡಕ್ ಆದೇಶ, ಮನೆ ಮನೆಗೆ ತೆರಳಿ ತಪಾಸಣೆ ಮಾಡುವಂತೆ ಸೂಚನೆ..!

ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ. ಶಿಗ್ಗಾವಿ ಮತ್ತು ಸವನೂರು ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳನ್ನು ಸ್ವಚ್ಛವಾಗಿರಿಸಿ. ಒಬ್ಬ ಕೋವಿಡ್ ಸೋಂಕಿತನ ಸಂಪರ್ಕ ಇರುವ 20 ಜನರ ಟೆಸ್ಟಿಂಗ್ ಕಡ್ಡಾಯವಾಗಿ ಮಾಡಬೇಕು. ಮನೆಮನೆಗೆ ಹೋಗಿ ಜನರ ಆಕ್ಸಿಜನ್ ಲೆವೆಲ್ ಮತ್ತು ತಾಪಮಾನವನ್ನು ಪರೀಕ್ಷೆ ಮಾಡಿ.

ಇವು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನೀಡಿದಕಟ್ಟುನಿಟ್ಟಿನ ಆದೇಶಗಳು.

ಗುರುವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕು ಆಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವಂತೆ ಕಟ್ಟು ನಿಟ್ಟಾಗಿ ಸೂಚಿಸಿದರು.

ಶಿಗ್ಗಾವಿ ಪಟ್ಟಣದಲ್ಲಿ ಇರುವ ಸರ್ಕಾರಿ ಆಸ್ಪತ್ರೆಯನ್ನು ಮೊದಲು ಸ್ವಚ್ಛವಾಗಿರಿಸಿ. ಪಟ್ಟಣವನ್ನು ಶುಚಿತ್ವ ಗೊಳಿಸಿ. ನೈರ್ಮಲ್ಯ ಕಾಪಾಡಲು ಮೊದಲ ಆದ್ಯತೆ ನೀಡಿ ಎಂದು ಪುರಸಭೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಇದುವರೆಗೆ ಈ ಕೆಲಸ ಮಾಡದ ಪುರಸಭೆ ಅಧಿಕಾರಿಗಳನ್ನು ಸಚಿವರುಬತರಾಟೆಗೆ ತೆಗೆದುಕೊಂಡರು.

ಸವನೂರು ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿ ಕೋವಿಡ್ ಮಿರಿ ಮೀರಿದರೆ ನಿಯಂತ್ರಿಸಲುಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ ಮನೆಮನೆಗೆ ತೆರಳಿ ಜನರನ್ನು ತಾಪಮಾನವನ್ನು ಪರೀಕ್ಷಿಸಿ. ಆಕ್ಸಿಜನ್ ಲೆವೆಲ್ ತಪಾಸಣೆ ಮಾಡಿ. ವಿಟಮಿನ್ ಸಿ, ಜಿಂಕ್, ಪ್ಯಾರಾಸಿಟಮಲ್ ಮಾತ್ರೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಿ. ರೆಮ್ ಡಿಸಿವಿರ್ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು

ಸವಣೂರಿನಲ್ಲಿ ಪ್ರತಿದಿನ 250 ಮತ್ತು ತಾಲೂಕಿನ ಇತರೆಡೆ 200 ಸೇರಿದಂತೆ ಒಟ್ಟು ಪ್ರತಿದಿನ 450ಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡುವಂತೆ ಅವರು ಆದೇಶ ನೀಡಿದರು. ಶಿಗ್ಗಾವಿ , ಸವಣೂರು ಮತ್ತು ಹಾನಗಲ್ ತಾಲ್ಲೂಕುಗಳಲ್ಲಿನ ಆಸ್ಪತ್ರೆಗಳಲ್ಲಿ ಶುಚಿತ್ವ ಮತ್ತು ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಹೊಣೆಗಾರಿಕೆ ಸವಣೂರು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಸೇರಿದ್ದು ಎಂದು ಅವರು ಹೇಳಿದರು.

ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಿ. ಅವರನ್ನು ತಪಾಸಣೆ ಮಾಡುವ ಕಾರ್ಯದಲ್ಲಿ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿ. ಜಾತ್ರೆ ರದ್ದುಪಡಿಸುವ ಸಂಬಂಧಪಟ್ಟಂತೆ ದೇವಸ್ಥಾನಗಳ ಮುಖಂಡರ ಜತೆ ಮಾತುಕತೆ ನಡೆಸಿ. ಕಲ್ಯಾಣ ಮಂಟಪಗಳಿಗೆ ಮೆಡಿ ಜಾರಿ ಮಾಡಿ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ. ಜನಸಂದಣಿಯನ್ನು ನಿಯಂತ್ರಿಸಿ ಎಂದು ಸವಣೂರು ಡಿವೈಎಸ್ ಪಿ ಗೆ ಸೂಚನೆ ನೀಡಿದರು.

Share this News
error: Content is protected !!