July 25, 2021

35 ವರ್ಷಗಳ ನಂತರ ಮನೆಯಲ್ಲಿ ಹೆಣ್ಣುಮಗುವಿನ ಜನನ: ಹೆಲಿಕ್ಯಾಪ್ಟರ್ ನಲ್ಲಿ ಮೊಮ್ಮಗಳನ್ನು ಕರೆತಂದ ಅಜ್ಜ..!

ರಾಜಸ್ಥಾನ : ಆ ಕುಟುಂಬದಲ್ಲಿ ಸಂಭ್ರಮ ಮನೆ‌ಮಾಡಿತ್ತು. 35 ವರ್ಷಗಳ ಬಳಿಕ‌ ಮನೆಯಲ್ಲಿ ಹೆಣ್ಣು ಮಗುವಿನ ಜನನವಾಗಿತ್ತು. ಈ‌ ಸಂಭ್ರಮವನ್ನು ಅಚರಣೆ ಮಾಡಲು ಮನಯ ಯಜಮಾನ ಹೆಲಿಕ್ಯಾಪ್ಟರ್ ನ್ನೆ ಬುಕ್ ಮಾಡಿ ಸ್ವಾಗತಿಸಿದ ಅಪರೂಪದ ಘಟನೆ ನಡೆದಿದೆ. ಆ ಮೂಲಕ ಮೊಮ್ಮಗಳ ಮೇಲಿನ ಪ್ರೀತಿಯನ್ನು ಅಜ್ಜ ಅಪರೂಪವಾಗಿ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ನಾಗೂರು ಜಿಲ್ಲೆಯ ನಿಂಬ್ಡಿ ಚಂಡವಾತ ಗ್ರಾಮದ ಮದನ್ ಲಾಲ್ ಎಂಬುವವರ ಮೊಮ್ಮಗಳು ರಿಯಾ ಬೇಬಿಯನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

ಕಳೆದ 35 ವರ್ಷದಿಂದ ಮದನ್ ಲಾಲ್ ಕುಟುಂಬದಲ್ಲಿ ಹಲವು ಮಕ್ಕಳು ಜನಿಸಿದ್ದಾರೆ. ಆದರೆ ಒಂದು ಹೆಣ್ಣು ಮಗು ಹುಟ್ಟಿರಲಿಲ್ಲ. ಈಗ ಮಗ ಹನುಮಾನ ರಾಮ್‌ಪ್ರಜಾಪತ್ ದಂಪತಿಗೆ ಹೆಣ್ಣು ಮಗು ಜನಿಸಿದೆ.

ಮೊಮ್ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ನಿರ್ಧರಿಸಿದ ಅಜ್ಜ ಮದನ್ ಲಾಲ್ ತವರಿನಲ್ಲಿದ್ದ ಸೊಸೆ ಹಾಗೂ ಮಗುವನ್ನು ಅಂದಾಜು 5 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಗೆ ಹೆಲಿಕ್ಯಾಪ್ಟರ್ ನಲ್ಲಿ ಕರೆತರಲು‌ ನಿರ್ಧಾರ ಮಾಡಿದ್ದರು.

ಸ್ಥಳೀಯ ಆಡಳಿತ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಎರಡು ಊರಿನಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಮೊಮ್ಮಗಳನ್ನು ಹೆಲಿಕ್ಯಾಪ್ಟರ್ ನಲ್ಲಿ ಕರೆತಂದಿದ್ದಾರೆ.

ಒಟ್ಟಿನಲ್ಲಿ ಮನೆಯಲ್ಲಿ ಹೆಣ್ಣು ಮಗು ಜನಸಿದರೆ ಸಾಕು. ಯಾಕಪ್ಪ ಹೆಣ್ಣು ಮಗು ಜನಿಸಿತು ಅನ್ನುವ ಕಾಲದಲ್ಲಿ, ಮೊಮ್ಮಗಳನ್ನು ಹೆಲಿಕಾಪ್ಟರ್ ಮೂಲಕ ಅದ್ದೂರಿಯಾಗಿ ಸ್ವಾಗತ ‌ಮಾಡಿಕೊಂಡಿದ್ದು ವಿಶೇಷವಾಗಿತ್ತು.

Share this News
error: Content is protected !!