July 25, 2021

ಮ್ಯಾನೇಜರ್ ಜೊತೆಗೆ ಲವ್ವಿಡವ್ವಿ, ಪ್ರೀತಿಗೆ ಅಡ್ಡ ಬಂದ ಅಣ್ಣನನ್ನೆ ಕೊಲೆ‌: ಮಿಸ್ ಕರ್ನಾಟಕ ಅರೆಸ್ಟ್..!

ಹುಬ್ಬಳ್ಳಿ: ತನ್ನ ಪ್ರೀತಿಗೆ ಅಡ್ಡ ಬಂದ ಸಹೋದರನ ಕೊಲೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಛೋಟಾ ಮುಂಬೈ ಚಿತ್ರದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟಿ, ಮಾಜಿ ಗಗನಸಖಿ ಹಾಗೂ ಮಿಸ್ ಕರ್ನಾಟಕ ಕಿರೀಟ ಪಡೆದಿದ್ದ ನಟಿ ಶನಯಾ ಕಾಟವೇಯನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿ‌ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ನಟಿ‌ ಶನಯಾ ಕಾಟವೇ ತನ್ನ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ನಿಯಾಜ್ ಅಹ್ಮದ್ ನನ್ನ ಹಲವು‌ ವರ್ಷಗಳಿಂದ ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಗೆ ಅಡ್ಡ ಬಂದ‌ ಸಹೋದರನು ನಿಯಾಜ್ ಗೆ ಬೆದರಿಕೆ ಹಾಕಿದ ಪರಿಣಾಮ ಕಳೆದ ೯ರಂದು ನಟಿಯ ಸಹೋದರ ರಾಕೇಶನನ್ನು ಕೊಲೆ‌ ಮಾಡಲಾಗಿತ್ತು. ಕೊಲೆ ಮಾಡಿದ ನಂತರ ರುಂಡ, ಮುಂಡ, ‌ಎರಡು ಕೈ, ಎರಡು ಕಾಲುಗಳನ್ನು ಕತ್ತರಿಸಿ ದೇಹವನ್ನು ಫೀಸ್ ಫೀಸ್ ಮಾಡಿ ಬೇರೆ ಬೇರೆ ಕಡೆ ಎಸೆಯಲಾಗಿತ್ತು.

ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಇತ್ತೀಚಿಗೆ ನಿಯಾಜ ಅಹ್ಮದ ಕಟಿಗಾರ, ತೌಸೀಫ ಅಹ್ಮದ್ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬುವವರನ್ನು ಬಂಧನ ಮಾಡಿದ್ದರು. ಇದೀಗ ಇದೇ ಪ್ರಕರಣದಲ್ಲಿ ಶನಾಯ ಕಾಟವೆ ಪಾತ್ರ ಇದ್ದು, ಹಾಗೂ ಶೈಪುದ್ದೀನ ಎಂಬಾತನನ್ನು ಬಂಧನ ಮಾಡಲಾಗಿದೆ.

ರಾಕೇಶ ಕಾಟವೇ ಕೊಲೆ ಪ್ರಕರಣದಲ್ಲಿ ಇದೂವರೆಗೂ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸುವ ಮೂಲಕ ಪೊಲೀಸ ಇಲಾಖೆಗೆ ಚಾಲೇಂಜ್ ಆಗಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

Share this News
error: Content is protected !!