May 19, 2021

ಮಾಸ್ಕ್ ಖರೀದಿಸಲು ಹಣವಿಲ್ಲ, ಪಕ್ಷಿ ಗೂಡು ಧರಿಸಿಕೊಂಡು ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಜನ ಮೆಚ್ಚುಗೆ..!

ತೆಲಂಗಾಣ- ವಿಶ್ವಾದ್ಯಂತ ಮಹಾಮಾರಿ ಕೊರೋನಾ ಎರಡನೇ ಅಲೆ ಹೆಚ್ಚಾಗಿದೆ. ಈ ಮಧ್ಯ ಸಾವಿರಾರು ಜನರು ಮಾಸ್ಕ್​ ಧರಿಸಿಕೊಳ್ಳದೇ ಓಡಾಡುವ ಜನರು ಹೆಚ್ಚಾಗಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮಾಸ್ಕ್ ಹಾಕುತ್ತಿಲ್ಲ.

ಅದ್ರೆ ಇಲ್ಲೊಬ್ಬ ವ್ಯಕ್ತಿ ಮಾಸ್ಕ್ ಖರೀದಿಗೆ ಹಣವಿಲ್ಲದಿದ್ದರೂ, ಪಕ್ಷಿಯ ಗೂಡು ಧರಿಸಿಕೊಂಡು ಸರ್ಕಾರಿ ಕಚೇರಿಗೆ ಆಗಮಿಸಿದ ಘಟನೆ ತೆಲಂಗಾಣದ ಮೆಹಬೂಬ್​ನಗರದಲ್ಲಿ ನಡೆದಿದೆ.

ಸರ್ಕಾರಿ ಕಚೇರಿಗೆ ಮಾಸ್ಕ್ ಬದಲಿಗೆ ಪಕ್ಷಿಗಳ ಗೂಡು ಹಾಕಿಕೊಂಡು ಆಗಮಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್​ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಮಾಸ್ಕ್ ಖರೀದಿ ಮಾಡಲು ಹಣ ಇರಲಿಲ್ಲ.‌ಹೀಗಾಗಿ ಪಕ್ಷಿಯ ಗೂಡು ಹಾಕಿಕೊಂಡು ಬಂದಿದ್ದಾನೆ.

ಅವಿದ್ಯಾವಂತ ವ್ಯಕ್ತಿಯಾದರೂ ಮಾಸ್ಕ್ , ಬದಲಿಗೆ ಪಕ್ಷಿ ಗೂಡು ಕಟ್ಟಿಕೊಂಡು ಬಂದಿದ್ದು, ಕೊರೋನಾದಿಂದ ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು ಅನ್ನೋದು ತೋರಿಸಿಕೊಟ್ಟಿದ್ದಾನೆ‌. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!