May 19, 2021

15 ವರ್ಷಗಳಿಂದ ಸ್ಮಶಾನದಲ್ಲಿ‌ ಮಹಿಳೆಯ ಕಾಯಕ: ಕೊರೋನಾದಿಂದ ಅನಾಥವಾಗಿರುವ ಶವಗಳಿಗೆ ಇವರೇ ಎಲ್ಲಾ..! ಇದು ಎಂಟೆದೆಯ ಬಂಟೆಯ ಸಾಹಸಗಾಥೆ ..!

ತುಮಕೂರು: ದೇಶ ಹಾಗೂ ರಾಜ್ಯದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ಅದರಲ್ಲೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ದಿಂದ ಮೃತಪಟ್ಟ
ಶವಗಳ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಾರೆ. ಅದರೆ ತುಮಕೂರಿನಲ್ಲಿ ಯಶೋದ ಎಂಬ ಗಟ್ಟಿಗಿತ್ತಿಮಹಿಳೆ ಶವ ಸುಡುವ ಕಾಯಕ ಮಾಡುತ್ತಿದ್ದಾಳೆ.

ಕೊರೋನಾ ಸೇರಿದಂತೆ ಇತರ ಕಾಯಿಲೆಗಳಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಜಿಲ್ಲೆಯ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ನಗರದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಗ್ಯ ಇಲಾಖೆ ಸ್ಮಶಾನದ ವರೆಗೆ ಶವಗಳನ್ನ ತರುತ್ತಾರೆ. ನಂತರ ಶವಗಳನ್ನು ಸುಟ್ಟು ಹಾಕುವ ಕೆಲಸವನ್ನ ಯಶೋದಾ ಮಾಡುತ್ತಿದ್ದಾಳೆ.

ತುಮಕೂರಿನ ಗಾರ್ಡನ್​ ಪ್ರದೇಶದಲ್ಲಿ ಹಿಂದೂ ರುದ್ರಭೂಮಿಯಲ್ಲಿ ಕಳೆದ ಎಂಟು ವರ್ಷಗಳಿಂದ ಯಶೋದಾ ಸ್ಮಶಾನ ದಲ್ಲಿ ಕೆಲಸ ಮಾಡುತ್ತಿದ್ದಾಳೆ.

ಪ್ರತಿನಿತ್ಯ ಬೆಳಗ್ಗೆ ೭ ರಿಂದ ರಾತ್ರಿ ೯ ಶವಗಳನ್ನು ಸುಡುವ ಕೆಲಸದಲ್ಲಿ‌ ಮಾಡುತ್ತಿದ್ದಾಳೆ. ಸ್ಮಶಾನ ಅಂದ್ರೆ ಹೆದರುವ ಈ ಕಾಲದಲ್ಲಿ ಗಟ್ಟಿಗಿತ್ತಿ ಮಹಿಳೆ ಯಶೋದ ಸ್ಮಶಾನದಲ್ಲಿ ಪುಣ್ಯದ ಕೆಲಸ ಮಾಡುತ್ತಿದ್ದಾಳೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಸ್ಮಶಾನದಲ್ಲಿ ಶವ ಸುಡುವ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಪಾತ್ರವಾಗಿದ್ದಾಳೆ. ಈ ಕಾರ್ಯ ನಮ್ಮ ಕಡೆಯಿಂದ ಗಟ್ಟಿಗಿತ್ತಿ ಮಹಿಳೆಗೆ ನಮ್ಮದೊಂದು ನಮಸ್ಕಾರ……

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!