July 25, 2021

CORONA BREAKING| ಖ್ಯಾತ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬದೇವಿ ಕೊರೋನಾಕ್ಕೆ ಬಲಿ..!

ಚಿಕ್ಕಮಗಳೂರು: ಕೊರೋನಾ ಅರ್ಭಟ ರಾಜ್ಯದಲ್ಲಿ ಹೆಚ್ಚಾಗಿದೆ. ಅದರಲ್ಲೂ ಸಾವಿನ ಪ್ರಕರಣಗಳು ಹೆಚ್ಷಾಗುತ್ತಿವೆ. ಖ್ಯಾತ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಕೊರೋನಾದಿಂದ ನಿಧನ ಹೊಂದಿದ್ದಾರೆ.

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬದೇವಿ 67 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಕಡೂರಿನ ಚೇತನ್ ನರ್ಸಿಂಗ್ ಹೋಮ್ ನಲ್ಲಿ ಶುಕ್ರವಾರ ರಾತ್ರಿ ನಿಧನರಾದರು.

ಇದೇ 20ರಂದು ಕೋವಿಡ್ 19 ಧೃಢಪಟ್ಟಿತ್ತು.
ಮನೆಯಲ್ಲಿ ನಿಗಾ ವ್ಯವಸ್ಥೆಯಲ್ಲಿ ಇದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಅವರಿಗೆ ಪತಿ ಎಸ್.ಜಿ.ಕೃಷ್ಣಮೂರ್ತಿ, ವೇದಾ ಸೇರಿ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಕೊರೋನಾ ರಾಜ್ಯದಲ್ಲಿ ತನ್ನ ಮರಣ ಮೃದಂಗವನ್ನ ಮುಂದುವರೆಸಿದೆ. ಎಲ್ಲರೂ ಜಾಗೃತಿವಾಗಿ ಮಾಸ್ಕ್ ಧರಿಸಿ ಓಡಾಡಬೇಕು.

Share this News
error: Content is protected !!