May 19, 2021

CORONA BREAKING| ಹಾವೇರಿ ಜಿಲ್ಲೆಯಲ್ಲಿ ಕೊರೋನಾಕ್ಕೆ ಇಂದು 5 ಬಲಿ, ಒಟ್ಟು 11 ಸೋಂಕಿತರ ಸಾವು..!

ಹಾವೇರಿ – ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅಬ್ಬರಕ್ಕೆ ಇಂದು ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿ 5 ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಕೊರೋನಾ ಎರಡನೇ ಅಲೆಗೆ ಒಟ್ಟು 11 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದೃಡಪಡಿಸಿದ್ದಾರೆ.

ಏಪ್ರೀಲ್ 12 ರಂದು ಬ್ಯಾಡಗಿ ತಾಲೂಕಿನ ಐವತ್ತಾರು ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ. ಏಪ್ರೀಲ್ 20ರಂದು ಹಾವೇರಿ ತಾಲೂಕಿನ ನಾಲ್ವತ್ತು ಮೂರು ವರ್ಷದ ಪುರುಷ ಮೃತಪಟ್ಟಿದ್ದಾನೆ. ಏಪ್ರೀಲ್ 21ರಂದು ರಾಣೆಬೆನ್ನೂರು ತಾಲೂಕಿನ ಐವತ್ತೇಳು ವರ್ಷದ ಪುರುಷ‌ ಮೃತಪಟ್ಟಿದ್ದಾನೆ. ಏಪ್ರೀಲ್ 21ರಂದು ಸವಣೂರು ತಾಲೂಕಿನ ಅರವತ್ತೈದು ವರ್ಷದ ಮಹಿಳೆ ಸಾವನ್ನಪ್ಪಿದ್ದು, ಏಪ್ರೀಲ್ 23ರಂದು ಬ್ಯಾಡಗಿ ತಾಲೂಕಿನ ಮೂವತ್ತೆಂಟು ವರ್ಷದ ಪುರುಷ ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಇವತ್ತು 92 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ‌. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 206 ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 386 ಸಕ್ರಿಯ ಪ್ರಕರಣಗಳು ಇವೆ‌. ಹಾವೇರಿ ಜಿಲ್ಲೆಯಲ್ಲಿನ ಈವರೆ 11983 ಕೊರೊನಾ‌ ಸೋಂಕಿತರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್ ಮಾಹಿತಿ ನೀಡಿದ್ದಾರೆ….

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!