March 9, 2021

HAVERI | 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸೋಮವಾರದೊಳಗೆ ವೇದಿಕೆಗಳ ವಿನ್ಯಾಸ ಅಂತಿಮ, ಹಾಗೂ ಸ್ಥಳ ಸ್ವಚ್ಛತೆ ತ್ವರಿತ ಆರಂಭಕ್ಕೆ ಸೂಚನೆ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ವಿವಿಧ ಸ್ಟಾಲ್‍ಗಳ ವಿನ್ಯಾಸವನ್ನು ಸೋಮವಾರದ ಒಳಗಾಗಿ ಅಂತಿಮಗೊಳಿಸಿ ಸಲ್ಲಿಸಲು ಜಿಲ್ಲಾಧಿಕಾರಿ ಸಂಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದ್ದಾರೆ.

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ನಿರ್ಮಾಣ ಹಾಗೂ ವಿವಿಧ ಮಳಿಗೆಗಗಳ ವಿನ್ಯಾಸ ಕುರಿತಂತೆ ಎಂ.ಸಿ.ಎ. ತಂಡ ಅಧಿಕಾರಿಗಳೊಂದಿಗೆ ಗುರುವಾರ ಉದ್ದೇಶಿತ ನಿವೇಶನದ ಸ್ಥಳ ಪರಿಶೀಲನೆ ನಡೆಸಿತು.


ಅಭಿಯಂತರರು ಹಾಗೂ ಎಂ.ಸಿ.ಎ. ತಂಡದೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಮುಖ್ಯ ವೇದಿಕೆ ನಿರ್ಮಾಣ, ಪುಸ್ತಕ ಮಳಿಗೆಗಳ ನಿರ್ಮಾಣ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು, ಊಟದ ಪೆಂಡಾಲ್ ನಿರ್ಮಾಣ, ಮಾಧ್ಯಮ ಕೇಂದ್ರ, ಫುಡ್ ಕೋರ್ಟ್, ವಾಹನ ನಿಲುಗಡೆ, ನೊಂದಣಿ ಕೌಂಟರ್, ಸಾರ್ವಜನಿಕ ಓಡಾಟಕ್ಕೆ ರಸ್ತೆ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸಮಾನಾಂತರ ವೇದಿಕೆಗಳ ನಿರ್ಮಾಣ ಹಾಗೂ ವೇದಿಕೆಗಳ ನೀಲಿ ನಕ್ಷೆಗಳನ್ನು ಅಂತಿಮಗೊಳಿಸಿ ಸೋಮವಾರದೊಳಗಾಗಿ ಸಲ್ಲಿಸಲು ಸೂಚನೆ ನೀಡಿದರು.
ಸಮ್ಮೇಳನಕ್ಕೆ ಪೂರ್ವ ಸಿದ್ಧತೆಗಳು ನಿರಂತರವಾಗಿ ನಡೆಯಬೇಕು. ಸಮ್ಮೇಳನ ನಡೆಯುವ ಖಾಲಿ ಜಮೀನಿನ ಸ್ವಚ್ಛತೆ ಮತ್ತು ಸಮತಟ್ಟುಗೊಳಿಸುವ ಕಾರ್ಯ, ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ  ಹಸಿವಿನಿಂದ ಬಳಲುತ್ತಿದ್ದ ಮಾರುತಿಗೆ ಅನ್ನದಾತರ ಆರೈಕೆ


ಮುಖ್ಯ ವೇದಿಕೆ ಹೊರತುಪಡಿಸಿ ಎರಡು ಸಮನಾಂತರ ವೇದಿಕೆ ನಿರ್ಮಾಣ ಅಗತ್ಯವಿದೆ. ಒಂದು ಸಾವಿರದಿಂದ ಒಂದೂವರೆಸಾವಿರ ಸಾಮಥ್ರ್ಯದ ಆಸನ ವ್ಯವಸ್ಥೆಯ ಸಮನಾಂತರ ವೇದಿಕೆ ಅವಶ್ಯಕತೆ ಇದ್ದು, ಹಳೆ ಪಿಬಿ ರಸ್ತೆಯಲ್ಲಿರುವ ಸಿದ್ಧರಾಮೇಶ್ವರ ಸಮುದಾಯ ಭವನ, ಅಂಬೇಡಕರ ಭವನ, ಜಿ.ಎಚ್.ಕಾಲೇಜ್ ಕ್ರೀಡಾಂಗಣದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡುವ ಕುರಿತಂತೆ ಅಧಿಕಾರಿಗಳಿಂದ ಸಲಹೆ ಪಡೆಯಲಾಯಿತು.
ಈಗಾಗಲೇ 19 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿವಾರು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಅನುಕೂಲವಾಗುವಂತೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.

ಇದನ್ನೂ ಓದಿ  ಎಸ್.ಎಸ್.ಎಲ್.ಸಿ. ವಾರ್ಷಿಕ ಫಲಿತಾಂಶ ಸುಧಾರಣೆಗೆ ಸಾಮೂಹಿಕ ಶ್ರಮ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ


ಫೆಬ್ರುವರಿ ಕೊನೆಯ ವಾರದಲ್ಲಿ ನಿಗಧಿಯಾದ ಸಮ್ಮೇಳನ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶೀಘ್ರವೇ ದಿನಾಂಕ ನಿಗಧಿಯಾಗಬಹುದು. ಸಮ್ಮೇಳನದ ಸಿದ್ಧತೆ ಕೆಲಸಗಳು ಹಿನ್ನಡೆಯಾಗಬಾರದು. ನಿರಂತರವಾಗಿ ಸಿದ್ಧತಾ ಕಾರ್ಯಗಳನ್ನು ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ನಡೆಸುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ.ವಿಜಯಕುಮಾರ ಸಂತೋಷ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷ ಯಲ್ಲಪ್ಪ ಆಲದಕಟ್ಟಿ, ಕಾರ್ಯದರ್ಶಿ ಎಸ್.ಎಸ್.ಬೇವಿನಮರದ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜನೀಯರ ಚನ್ನವೀರಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿರಕ್ತಿಮಠ, ಪೌರಾಯುಕ್ತ ಪರಶುರಾಮ ಚಲವಾದಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಕ ಜಗದೀಶ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಠದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಜೋಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಇತರರು ಉಪಸ್ಥಿತರಿದ್ದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!