July 25, 2021

ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದ ಶಿಕ್ಷಕ ಸಾವು..(?) ಬೇಸರ ವ್ಯಕ್ತಪಡಿಸಿದ ಮೃತ ಶಿಕ್ಷಕನ ಕುಟುಂಬದವರು..! ಯಾಕೆ ಗೊತ್ತಾ..!?

ರಾಯಚೂರು: ಕಳೆದ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಲಿಂಬೆ ಹಣ್ಣಿನ ಹನಿ ಕುರಿತಾದ ಸುದ್ದಿ ಕೇಳಿ ಶಿಕ್ಷಕರೊಬ್ಬರು ಮೂಗಿನೊಳಗೆ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು.

ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಶಾಲಾ ಶಿಕ್ಷಕ ಬಸವರಾಜ ಮೃತ ಎಂದು ಗುರುತಿಸಲಾಗಿದೆ. ಮೂಗಿನಲ್ಲಿ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡರೆ ಕೊರೋನಾ ಬರುವುದಿಲ್ಲ ಎಂದುಕೊಂಡು ಬಸವರಾಜ್ ಅವರು ಬೆಳಗ್ಗೆ ಮೂಗಿಗೆ ನಿಂಬೆಹಣ್ಣಿನ ಹನಿ ಬಿಟ್ಟು ಕೊಂಡಿದ್ದರು. ನಂತರ ಕೆಲಸಮಯಗಳ ಬಳಿಕ ಬಸವರಾಜ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಸಂಬಂಧಿಕರು ಅಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.

ಆರೋಗ್ಯದಿಂದಿದ್ದ ಬಸವರಾಜ ಅವರು ನಿಂಬೆಹಣ್ಣಿನ ರಸ ಮೂಗಿಗೆ ಬಿಟ್ಟು ಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದಾಗಿ ನಿಂಬೆ ಹಣ್ಣಿನ ರಸದಿಂದಾಗಿ ಸಾವನ್ನಪ್ಪಿರಬಹುದೆಂದು ಸುದ್ದಿಯಾಗಿತ್ತು.

ಕುಟುಂಬ ಹೇಳಿದ್ದು ಹೀಗೆ…!?

ಬೆಳಗ್ಗೆ ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು. ಆದ್ದರಿಂದ ಹೃದಯಘಾತವಾಗಿದೆ. ಬಿಪಿ ಲೋ ಆಗುತ್ತಿದ್ದಂತೆ ಅವರನ್ನು ತಕ್ಷಣವೇ ನಗರದ ಶಾಂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ನಮಗೆ ಎನು ಅಂತಾನೇ ಗೊತ್ತಾಗುತ್ತಿಲ್ಲ.

ಆಸ್ಪತ್ರೆ ವೈದ್ಯ ಡಾ. ಸುರೇಶ ಅವರನ್ನು ಬಸವರಾಜ ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣ ಹೋಗಿತ್ತು. ಅವರು ತೀರಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ನಂತರ ನೋಡಬೇಕಾಗುತ್ತದೆ ಎಂದರಜ.

ವಂದತಿಗೆ ಬೇಸರ..!

ಶಿಕ್ಷಕ ಬಸವರಾಜ ಹೃದಯಾಘಾತದಿಂದ ಮೃತರಾದರೂ ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂಬ ವದಂತಿಯು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದಕ್ಕೆ ಮೃತನ ಕುಟುಂಬ ವರ್ಗ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ನೋವನ್ನು ಹಂಚಿಕೊಂಡ ಮೃತನ ಸಹೋದರ ಮಹಾಂತೇಶ, ”ನಮ್ಮ ಸಹೋದರನಿಗೆ ಪತ್ನಿ, ಒಬ್ಬ ಪುತ್ರಿ, ನಾನು ಸೇರಿ ಇಬ್ಬರು ಸಹೋದರರು ಮತ್ತು ಬಂಧುಗಳು ಇದ್ದೇವೆ. ಬಸವರಾಜ ಹೃದಯಾಘಾತದಿಂದ ಮೃತರಾಗಿದ್ದಾರೆ. ಆದರೂ ಅವರ ಸಾವಿಗೆ ಬೇರೆ ಏನೋ ಕಾರಣ ನೀಡಿ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದು ನಮ್ಮೆಲ್ಲರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.

Share this News
error: Content is protected !!