July 25, 2021

HAVERI| ಗ್ರಾಮಸ್ಥರು, ಕುಟುಂಬ ಸದಸ್ಯರಿಂದ ಅಂತ್ಯಕ್ರಿಯೆಗೆ ಹಿಂದೇಟು..! ತಾಸುಗಟ್ಟಲೆ ಶವದೊಂದಿಗೆ ಸ್ಮಶಾನ ಕಾದ ಅಂಬ್ಯುಲೆನ್ಸ್ ಡ್ರೈವರ್..!

ಹಾವೇರಿ-ರಾಜ್ಯದಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಅದರಲ್ಲೂ ಸಾವಿನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಅದರೆ ಕೊರೋನಾ ಪಾಸಿಟಿವ್ ನಿಂದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಭಯದಿಂದ ಅಂತ್ಯಕ್ರಿಯೆ ಮಾಡಲು ಸಂಬಂಧಿಕರು ಹಾಗೂ ಗ್ರಾಮಸ್ಥರು
ಒಪ್ಪದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.

ಅಂಬ್ಯುಲೆನ್ಸ್ ನಲ್ಲೇ ಮಹಿಳೆಯ ಮೃತ ದೇಹವನ್ನ್ನು ಇಟ್ಟು ಸಿಬ್ಬಂದಿಗಳು ಕಾಯುತ್ತಿದ್ದಾರೆ. ಕಳೆದ 2 ಗಂಟೆಗಳಿಂದ ಅಂಬ್ಯುಲೆನ್ಸ್ ನಲ್ಲೇ ಮಹಿಳೆಯ ಮೃತದೇಹ ಇಟ್ಟು ಡ್ರೈವರ್ ವಾಹನದಲ್ಲಿದ್ದಾರೆ. ಕೊರೋನಾ ಭಯ ಇರೋದ್ರಿಂದ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾರು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಕೊವೀಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡಬೇಕು.

ಯಾರು ಬಾರದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ದಿನಗಳ ಹಿಂದೆ ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಮಹಿಳೆ ಮೃತಪಟ್ಟಿದ್ದಾಳೆ. ಒಟ್ನಲ್ಲಿ ಕೊರೋನಾ ಪಾಸಿಟಿವ್ ಆಗಿ ಮೃತಪಟ್ಟಿದ್ದರಿಂದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

____

Share this News
error: Content is protected !!