July 25, 2021

ಅಂಬ್ಯುಲೆನ್ಸ್ ನೋಡಿ ಕಬ್ಬಿನ ಗದ್ದೆಯಲ್ಲಿ ಪರಾರಿಯಾದ ಸೋಂಕಿತ: ಕಬ್ಬೂರು ತಾಂಡಾದಲ್ಲಿ ನಡೆದ ಘಟನೆ..!

ಹಾವೇರಿ- ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅರ್ಭಟ ಮುಂದುವರೆದಿದೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತಲಿದೆ. ಇದರ ನಡುವೆ ಕೊರೋನಾ ಸೋಂಕಿತನೊಬ್ಬನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲು ಹೋಗಿದ್ದ ವೇಳೆ ಮನೆಯಿಂದ ಎಸ್ಕೇಪ್ ಆದ ಘಟನೆ ಹಾವೇರಿ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ.

ಕಬ್ಬೂರು ತಾಂಡಾದ ನಿವಾಸಿ 35 ರಿಂದ 40 ವರ್ಷದ ಸೋಂಕಿತ ಮನೆಯಿಂದ ಪರಾರಿಯಾಗಿದ್ದಾನೆ. ಇವತ್ತು ಈ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದ್ದರಿಂದ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಲು ಕರೆತರಲು ಹೋಗಿದ್ದರು‌. ಈ ವೇಳೆ ಅಂಬ್ಯುಲೆನ್ಸ್ ವಾಹನ ನೋಡುತ್ತಲೆ ಕಬ್ಬಿನ ಗದ್ದೆಯಲ್ಲಿ ಓಡಿ ಹೋಗಿ ಸೋಂಕಿತ ಎಸ್ಕೇಪ ಆಗಿದ್ದಾನೆ.

ಸೋಂಕಿತನಿಗಾಗಿ ಅಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ ಮತ್ತು ಶಂಕರ‌ ಲಮಾಣಿ ಹಾಗೂ ಗ್ರಾಮಸ್ಥರಿಂದ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಹುಡುಕಾಟ ನಡೆಸಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೋಂಕಿತ ಮನೆಯಿಂದ ಪರಾರಿಯಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

 

______

Share this News
error: Content is protected !!