May 19, 2021

ಹಾವೇರಿ ಜಿಲ್ಲೆಯಲ್ಲಿ ಇವತ್ತು 111 ಜನರಿಗೆ ಕೊರೋನಾ ಸೋಂಕು, 6 ಜನರ ಬಲಿ: 12406 ಕ್ಕೆ ಏರಿದ ಸೋಂಕಿತರ ಸಂಖ್ಯೆ..!

ಹಾವೇರಿ – ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅಬ್ಬರಕ್ಕೆ ಇಂದು ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ 6 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ, ಕೊರೋನಾ ಎರಡನೇ ಅಲೆಗೆ ಒಟ್ಟು 23 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದೃಡಪಡಿಸಿದೆ.

ಏಪ್ರೀಲ್ 28 ರಂದು ಹಾನಗಲ್ ತಾಲೂಕಿನ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಏಪ್ರೀಲ್ 27 ರಂದು ಸವಣೂರು ತಾಲೂಕಿನ 60 ವರ್ಷದ ಪುರುಷ ಸಾವನ್ನಪ್ಪಿದ್ದು, ಏಪ್ರೀಲ್ 27ರಂದು ಬ್ಯಾಡಗಿ ತಾಲೂಕಿನ 62 ವರ್ಷದ ಮಹಿಳೆ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಏಪ್ರೀಲ್ 26ರಂದು ಶಿಗ್ಗಾಂವಿ ತಾಲೂಕಿನ 75 ವರ್ಷದ ಪುರುಷ ಸಾವನ್ನಪ್ಪಿದ್ದಾನೆ. ಏಪ್ರಿಲ್ 27, 28 ರಂದು 58 ಮತ್ತು 51 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಇವತ್ತು 111 ಜನರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 223 ಏರಿದೆ. ಜಿಲ್ಲೆಯಲ್ಲಿ ಕೊರೋನಾ ಸಕ್ರೀಯ 585 ಪ್ರಕರಣಗಳು ಇವೆ. ಜಿಲ್ಲೆಯಲ್ಲಿನ ಈವರೆಗಿನ ಕೊರೋನಾ ಸೋಂಕಿತರ ಸಂಖ್ಯೆ 12406 ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್ ಮಾಹಿತಿ ನೀಡಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!