May 19, 2021

ದೇಶದ ಒಳಿತಿಗಾಗಿ ಸಂಕಲ್ಪ: ಸೈಕಲ್ ಮೂಲಕ ರಾಮಜನ್ಮಭೂಮಿ ಅಯೋಧ್ಯೆ ತಲುಪಿದ ಹಾವೇರಿ ಹೈದಾ..!

ಹಾವೇರಿ: ಯಾಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆ. ರಾಮಭಕ್ತ ಯುವಕನಿಂದ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದ, ಸೈಕಲ್ ಯಾತ್ರೆ ರಾಮಜನ್ಮಭೂಮಿ ಅಯೋದ್ಯ ತಲುಪಿದ್ದಾನೆ.

ಹಾವೇರಿ ನಗರದ ಯುವಕ ವಿವೇಕಾನಂದ ಎಸ್ ಇಂಗಳಗಿ, ತಮ್ಮೆಲ್ಲ ಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ.

ವಿವೇಕಾನಂದ ಎಸ್ ಇಂಗಳಗಿ ಕೊರೋನಾ ಮುಕ್ತ ಭಾರತವಾಗಬೇಕು. ವಿಶ್ವ ,ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಅರ್ಭಟ ಹೆಚ್ಚಾಗುತ್ತಿದೆ. ಕೊರೋನಾ ಮುಕ್ತ ಭಾರತವಾಗಬೇಕು. ಹಾವೇರಿ ಜಿಲ್ಲೆಯ ಅಭಿವೃದ್ಧಿ, ಸಮಸ್ತ ಕರ್ನಾಟಕ ಜನರಿಗೆ ಒಳಿತಿಗಾಗಿ, ಜೀವಜಲ ಉಳಿವಿಗಾಗಿ ಸಂಕಲ್ಪ ಮಾಡಿಕೊಂಡಿದ್ದಾನೆ.

ವಿವೇಕಾನಂದ ಏಪ್ರೀಲ್ 12 ರಂದು ಸೈಕಲ್ ಯಾತ್ರೆ ಪ್ರಾರಂಭಸಿದ್ದಾನೆ. ಪ್ರತಿನಿತ್ಯ100 ಕಿಲೋಮೀಟರ್ ವರೆಗೆ ಸೈಕಲ್ ಪ್ರವಾಸ ಮಾಡಿದ್ದಾನೆ. ಮಾರ್ಗದಲ್ಲಿಯೇ ಸಿಗುವ ರಾಮಭಕ್ತರ ಮನೆಯಲ್ಲಿ ವಸತಿ ಮಾಡಿ ನಂತರದಲ್ಲಿ ಮತ್ತೆ ಪ್ರಯಾಣವನ್ನು ಬೆಳೆಸುತ್ತಾ 2000 ಕಿಲೋಮೀಟರ್ ಪ್ರಯಾಣ ಮಾಡಿದ್ದಾನೆ.

ಅಯೋಧ್ಯಯಲ್ಲಿ ಶ್ರೀ ರಾಮನ ದರ್ಶನ ಪಡೆದು ಅಲ್ಲಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಾವೇರಿ ಕಡೆಗೆ ಪ್ರಯಾಣ ಬೆಳೆಸಲಿದ್ದಾನೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!